ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಿಗ್ಸ್ ಬಾಸನ್ ಅನ್ನು ಪತ್ತೆ ಮಾಡಿದ್ದ ಭೌತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನ

ಸೃಷ್ಟಿಯ ಮೂಲ ಧಾತು ಹಿಗ್ಸ್ ಬಾಸನ್(ದೇವ ಕಣ) ಅನ್ನು ಪತ್ತೆ ಮಾಡಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಹಿಗ್ಸ್ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ ನಿವಾಸದಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
09:39 AM Apr 10, 2024 IST | Ashitha S

ಲಂಡನ್: ಸೃಷ್ಟಿಯ ಮೂಲ ಧಾತು ಹಿಗ್ಸ್ ಬಾಸನ್(ದೇವ ಕಣ) ಅನ್ನು ಪತ್ತೆ ಮಾಡಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಹಿಗ್ಸ್ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ ನಿವಾಸದಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

Advertisement

ಅವರ ಸಾವಿಗೆ ರಕ್ತ ಸಂಬಂಧಿ ಸಮಸ್ಯೆ ಕಾರಣ ಎಂದು ಅವರ ಆಪ್ತ ಸ್ನೇಹಿತ, ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಭೌತ ವಿಜ್ಞಾನಿ ಅಲನ್ ವಾಕರ್ ಹೇಳಿದ್ದಾರೆ.

ಬಿಗ್ ಬ್ಯಾಂಗ್ ನಂತರ ಸೃಷ್ಟಿಯ ಮೂಲ ಎನ್ನಲಾದ ಹಿಗ್ಸ್ ಬಾಸನ್(ದೈವ ಕಣ) ಅಸ್ತಿತ್ವವನ್ನು ಅವರು ಪತ್ತೆ ಮಾಡಿದ್ದರು. ಈ `ಹಿಗ್ಸ್ ಬೋಸನ್ ಕಣದ ಅಸ್ತಿತ್ವವನ್ನು ಬ್ರಿಟನ್ ವಿಜ್ಞಾನಿ ಪೀಟರ್ ಹಿಗ್ಸ್ ಸೇರಿದಂತೆ ಇತರ ಆರು ಭೌತವಿಜ್ಞಾನಿಗಳು 1964ರಲ್ಲಿ ಮೊದಲ ಬಾರಿ ಸೈದ್ಧಾಂತಿಕವಾಗಿ ನಿರೂಪಿಸಿದ್ದರು. ಕಣಭೌತಶಾಸ್ತ್ರದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್‌ಸ್ಟೀನ್ ಅವರು ಹಿಂದೆ ಮಂಡಿಸಿದ್ದ ಸಿದ್ಧಾಂತ ಪೀಟರ್ ಹಿಗ್ಸ್ ಅವರಿಗೆ ಪ್ರೇರಣೆಯಾಗಿತ್ತು.

Advertisement

Advertisement
Tags :
BreakingNewsdeathindiaKARNATAKANewsKannadaPeter Higgs
Advertisement
Next Article