For the best experience, open
https://m.newskannada.com
on your mobile browser.
Advertisement

ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ಕಾಣಿಸಿಕೊಂಡಿದೆ ಪಿಲಿಚಾಮುಂಡಿ ಹೆಜ್ಜೆ

ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರಿನ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ನಡೆದಿತ್ತು.  ಅದರಂತೆ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ.
06:47 PM Jan 02, 2024 IST | Ashika S
ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ಕಾಣಿಸಿಕೊಂಡಿದೆ ಪಿಲಿಚಾಮುಂಡಿ ಹೆಜ್ಜೆ

ಮಂಗಳೂರು: ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರಿನ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ನಡೆದಿತ್ತು.  ಅದರಂತೆ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ.

Advertisement

ದೈವದ ಮುನಿಸಿನ ಬೆನ್ನಲ್ಲೇ ಪ್ರಶ್ನೆ ಇಟ್ಟಾಗ ಪಾಳುಬಿದ್ದ ದೈವಸ್ಥಾನ ಹಾಗೂ ನೇಮೋತ್ಸವ ಸ್ಥಗಿತಗೊಳಿಸಿದ್ದು ಕಾಣಿಸಿದೆ. ಹೀಗಾಗಿ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ 18 ವರ್ಷಗಳ ಬಳಿಕ ದೈವದ ನೇಮೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದೆ.

ಕಾಮಗಾರಿ ಹೊತ್ತಲ್ಲಿ ಪವಾಡ ಕಂಡು ದೈವಾರಧಕರಲ್ಲಿ ಅಚ್ಚರಿ ವ್ಯಕ್ತವಾಗಿದೆ. ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ಹುಲಿಯ ಹೆಜ್ಜೆ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಗಿದೆ. ಸ್ಥಳೀಯ ಯುವಕರು ಕೆಲಸ ಮಾಡುತ್ತಿದ್ದಾಗ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

Advertisement

ಗ್ರಾಮಸ್ಥರು ಮತ್ತು ಎಂಆರ್​ಪಿಎಲ್ ಸಹಕಾರದಲ್ಲಿ ಜ.4 ರಂದು ನೇಮೋತ್ಸವ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ನೇಮೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

Advertisement
Tags :
Advertisement