For the best experience, open
https://m.newskannada.com
on your mobile browser.
Advertisement

ರನ್ ವೇನಲ್ಲೇ ಹೊತ್ತಿ ಉರಿದ ಪ್ರಯಾಣಿಕರಿದ್ದ ವಿಮಾನ

ಜಪಾನ್ ನ ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್ವೇಯಲ್ಲಿಇಂದು ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
03:23 PM Jan 02, 2024 IST | Ramya Bolantoor
ರನ್ ವೇನಲ್ಲೇ ಹೊತ್ತಿ ಉರಿದ ಪ್ರಯಾಣಿಕರಿದ್ದ ವಿಮಾನ

ಟೋಕಿಯೊ: ಜಪಾನ್ ನ ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್ವೇಯಲ್ಲಿಇಂದು ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಕಿಟಕಿಗಳಿಂದ ಜ್ವಾಲೆಗಳು ಹೊರಬರುತ್ತಿರುವ ದೃಶ್ಯ ವೈರಲ್‌ ಆಗಿದೆ.

Advertisement

ಕೋಸ್ಟ್ ಗಾರ್ಡ್ ವಿಮಾನದೊಂದಿಗಿನ ಸಂಭಾವ್ಯ ಡಿಕ್ಕಿಯು ವಿಮಾನದಲ್ಲಿ ಬೆಂಕಿಗೆ ಕಾರಣವಾಗಿದೆ ಎಂದು ಮೂಲಗಳು ವರದಿ ಮಾಡಿದೆ. ಹೊಕ್ಕೈಡೊದ ಶಿನ್-ಚಿಟೋಸ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು 300 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಜಪಾನ್ ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸುವ ಕೆಲಸವನ್ನು ಮಾಡಿದ್ದಾರೆ. ಹನೆಡಾ ಜಪಾನ್ ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

Advertisement

ಜಪಾನ್ ಏರ್‌ಲೈನ್ಸ್‌ನ JAL 516 ವಿಮಾನವು ಹೊಕ್ಕೈಡೋದಿಂದ ಟೇಕ್ ಆಫ್ ಆಗಿದೆ. ಈ ವಿಮಾನದಲ್ಲಿ ಬರೋಬ್ಬರಿ 367 ಮಂದಿ ಪ್ರಯಾಣಿಕರಿದ್ದರು. ಸದ್ಯ ಎಲ್ಲರೂ ಸುರಕ್ಷಿತರಾಗಿದ್ದಾರೆ. ರನ್‌ವೇ ಮೇಲೆ ಇಳಿಯುತ್ತಿದ್ದಂತೆ ವಿಮಾನ ಬೆಂಕಿಗೆ ಆಹುತಿಯಾಗಿತ್ತು. ಕೂಡಲೇ ಪ್ರಯಾಣಿಕರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಜಪಾನ್​ ಏರ್​ಪೋರ್ಟ್​​ನಲ್ಲಿ ಹೊತ್ತಿ ಉರಿದ ವಿಮಾನದ ದೃಶ್ಯಗಳು ವೈರಲ್ ಆಗಿದೆ. ಟೋಕಿಯೋ ಏರ್​ಪೋರ್ಟ್​ನಲ್ಲಿ ಸದ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

Advertisement
Tags :
Advertisement