For the best experience, open
https://m.newskannada.com
on your mobile browser.
Advertisement

ಸಿಲಿಕಾನ್‌ ಸಿಟಿಯಲ್ಲಿ ಬೆಂಕಿ ಅವಘಡ; 30 ರಿಂದ 40 ವಾಹನಗಳು ಬೆಂಕಿಗಾಹುತಿ

ನಗರದ ಪ್ಲಾಸ್ಟಿಕ್‌ ಗೋದಾಮು ಬೆಂಕಿ ಸಂಭವಿಸಿದ್ದು ಪರಿಣಾಮ 30 ರಿಂದ 40 ವಾಹನಗಳು ಸಟ್ಟು ಕರಕಲಾಗಿವೆ. ಈ ಘಟನೆ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿ ಬಳಿ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
01:06 PM Feb 23, 2024 IST | Ashitha S
ಸಿಲಿಕಾನ್‌ ಸಿಟಿಯಲ್ಲಿ ಬೆಂಕಿ ಅವಘಡ  30 ರಿಂದ 40 ವಾಹನಗಳು ಬೆಂಕಿಗಾಹುತಿ

ಬೆಂಗಳೂರು: ನಗರದ ಪ್ಲಾಸ್ಟಿಕ್‌ ಗೋದಾಮು ಬೆಂಕಿ ಸಂಭವಿಸಿದ್ದು ಪರಿಣಾಮ 30 ರಿಂದ 40 ವಾಹನಗಳು ಸಟ್ಟು ಕರಕಲಾಗಿವೆ. ಈ ಘಟನೆ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿ ಬಳಿ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Advertisement

ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ರಿಜ್ವಾನ್ ಎಂಬುವವರಿಗೆ ಸೇರಿದ ಪಾರ್ಕಿಂಗ್ ಜಾಗ ಇದಾಗಿದ್ದು, ಬಾಡಿಗೆಗೆ ಪಡೆದು ಪಾರ್ಕಿಂಗ್ ನಡೆಸುತ್ತಿದ್ದರು. ಪ್ರತಿ ದಿನ ವಾಹನಕ್ಕೆ 30 ರೂಪಾಯಿ ಚಾರ್ಜ್ ಮಾಡುತ್ತಿದ್ದೆವು ಎಂದು ಘಟನೆ ಬಳಿಕ ಗೋಡೌನ್ ಬಳಿ ಬಂದು ಕಣ್ಣೀರು ಹಾಕಿದ್ದಾರೆ.  ಪಾರ್ಕಿಂಗ್‌ ಸ್ಥಳದ ಪಕ್ಕದಲ್ಲೇ ಪ್ಲಾಸ್ಟಿಕ್‌ ಗೊಡೌನ್‌ ಇದ್ದ ಪರಿಣಾಮ ವಾಹನಗಳು ಸಟ್ಟು ಕರಕಲಾಗಿವೆ. ಮಾದ್ಯಮದೊಂದಿಗೆ ಮಾತನಾಡಿದ ಅವರು,ಆಟೋ ಓಡಿಸುವುದು, ಬಟ್ಟೆ ಸೇರಿದಂತೆ ಹಲವು ವ್ಯಾಪಾರ ಮಾಡುತ್ತಿದ್ದರು.

ರಾತ್ರಿ ತಂದು ವಾಹನ ಪಾರ್ಕ್ ಮಾಡಿ ಹೋಗುತ್ತಿದ್ದರು ಆದರೆ ಈಗ ಎಲ್ಲಾ ಸುಟ್ಟು ಭಸ್ಮವಾಗಿದೆ, ನಮ್ಮ ಮುಂದಿನ ಜೀವನದ ಪಾಡೇನು ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

Advertisement
Tags :
Advertisement