For the best experience, open
https://m.newskannada.com
on your mobile browser.
Advertisement

ರೋಟರಿ ಮಂಗಳೂರು ಸೀಸೈಡ್‌ ವತಿಯಿಂದ ಚಿಣ್ಣರ ಚಿಲಿಪಿಲಿ: ಕಾರ್ಯಕ್ರಮ ಯಶಸ್ವಿಗೊಳಿಸಿದ ಮಕ್ಕಳು

ರೋಟರಿ ಮಂಗಳೂರು ಸೀಸೈಡ್‌ ವತಿಯಿಂದ ಪ್ಲೇ ಸ್ಕೂಲ್‌ 10 ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
06:40 PM Dec 04, 2023 IST | Gayathri SG
ರೋಟರಿ ಮಂಗಳೂರು ಸೀಸೈಡ್‌ ವತಿಯಿಂದ ಚಿಣ್ಣರ ಚಿಲಿಪಿಲಿ  ಕಾರ್ಯಕ್ರಮ ಯಶಸ್ವಿಗೊಳಿಸಿದ ಮಕ್ಕಳು

ಮಂಗಳೂರು: ರೋಟರಿ ಮಂಗಳೂರು ಸೀಸೈಡ್‌ ವತಿಯಿಂದ ಪ್ಲೇ ಸ್ಕೂಲ್‌ 10 ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advertisement

ಕಾರ್ಯಕ್ರಮವು ಡಿ.3ರಂದು ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ನಡೆಯಿತು. ಫ್ಯಾನ್ಸಿ ಡ್ರೆಸ್‌, ಸ್ಮರಣಶಕ್ತಿ ಸ್ಪರ್ಧೆ. ಚಿತ್ರಕಲೆ, ಹಾಡುಗಾರಿಕೆ, ಗುಂಪು ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇನ್ನು ಕಾಮತ್‌ ಕೆಟರರ್ಸ್‌ ಸಂಸ್ಥೆಯ ಮಾಲೀಕರಾದ ಸುಧಾಕರ ಕಾಮತ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಜೋನ್‌ 3 ರ ಗವರ್ನರ್‌ ಶಿವಾನಿ ಬಾಳಿಗ, ಕ್ಲಬ್‌ ಸಲಹೆಗಾರ ಮಾಧವ ಸುವರ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರೊಟೇರಿಯನ್‌ ಶಿವರಾಮ್‌, ರೊಟೇರಿಯನ್‌ ಅಚನ್‌ ಶೆಟ್ಟಿ, ಕಿರಣ್‌ ಕುಮಾರ್‌, ಅಶೋಕ್‌ ಎಂ.ಕೆ. ಮೊದಲಾದವರು ಉಪಸ್ಥಿತರಿದ್ದರು.

Advertisement

Advertisement
Tags :
Advertisement