For the best experience, open
https://m.newskannada.com
on your mobile browser.
Advertisement

ಸ್ಟಾರ್​ ಆಟಗಾರ ಲಹಿರು ತಿರಿಮನ್ನೆ ಕಾರಿಗೆ ಭೀಕರ ಅಪಘಾತ : ಆಸ್ಪತ್ರೆಗೆ ದಾಖಲು

ಶ್ರೀಲಂಕಾದ ಮಾಜಿ ಆಟಗಾರ ಲಹಿರು ತಿರಿಮನ್ನೆ ಅವರ ಕಾರಿಗೆ ಭೀಕರ ಅಪಘಾತ ಸಂಭವಸಿದೆ.ಈ ಘಟನೆ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದಿದೆ.
06:02 PM Mar 14, 2024 IST | Nisarga K
ಸ್ಟಾರ್​ ಆಟಗಾರ ಲಹಿರು ತಿರಿಮನ್ನೆ ಕಾರಿಗೆ ಭೀಕರ ಅಪಘಾತ   ಆಸ್ಪತ್ರೆಗೆ ದಾಖಲು
ಸ್ಟಾರ್​ ಆಟಗಾರ ಲಹಿರು ತಿರಿಮನ್ನೆ ಕಾರಿಗೆ ಭೀಕರ ಅಪಘಾತ : ಆಸ್ಪತ್ರೆಗೆ ದಾಖಲು

ಶ್ರೀಲಂಕಾ: ಶ್ರೀಲಂಕಾದ ಮಾಜಿ ಆಟಗಾರ ಲಹಿರು ತಿರಿಮನ್ನೆ ಅವರ ಕಾರಿಗೆ ಭೀಕರ ಅಪಘಾತ ಸಂಭವಸಿದೆ.ಈ ಘಟನೆ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದಿದೆ.

Advertisement

ಲಹಿರು ಅವರು ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜಗುಜ್ಜಾಗಿದೆ.ಲಹಿರು ಅವರು ಪ್ರಾಣಾಪಯದಿಂದ ಪಾರಾಗಿದ್ದ ಸಣ್ಣ ಪುಟ್ಟ ಗಾಯಗಳಾಗಿವೆ.ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಕಾರು ಅಪಘಾತದ ಫೋಟೋಗಳು ವೈರಲ್​ ಆಗುತ್ತಿದ್ದು, ಭೀಕರ ಅಪಘಾತ ನೋಡಿದ ನೆಟ್ಟಿಗರು ಆಟಗಾರ ಉಳಿದಿರುವುದೇ ಪುಣ್ಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ರಿಷಭ್​ ಪಂತ್​ ಅವರಿಗೂ ಕೂಡ ಹೀಗೆ ಅಪಘಾತಕ್ಕೀಡಾಗಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ

ಸೂಪರ್‌ಸ್ಟಾರ್ ಸ್ಟ್ರೈಕರ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಿರಿಮನ್ನೆ ಅವರು ಸುರಕ್ಷಿತವಾಗಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.

Advertisement
Tags :
Advertisement