For the best experience, open
https://m.newskannada.com
on your mobile browser.
Advertisement

ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಪಿಎಂ, ಸಿಎಂಗೆ ಮನವಿ

ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಕರ್ನಾಟಕ ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ವಿವಿಧ ಊರುಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, NR Pura, ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು ತಾಲೂಕುಗಳಲ್ಲಿ ತುಳು ಭಾಷಿಕರು ವಾಸಿಸುತ್ತಿದ್ದಾರೆ ಹಾಗೂ 2011 ರ ಜನಗಣತಿ ಪ್ರಕಾರ 18 ಲಕ್ಷ ಜನ ತುಳುವರು ಇದ್ದಾರೆ ಎಂದು ವರದಿಯಾಗಿದೆ.
03:42 PM Feb 08, 2024 IST | Ashika S
ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಪಿಎಂ  ಸಿಎಂಗೆ ಮನವಿ

ಮಂಗಳೂರು: ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಕರ್ನಾಟಕ ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ವಿವಿಧ ಊರುಗಳಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್ಆರ್ ಪುರ, ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು ತಾಲೂಕುಗಳಲ್ಲಿ ತುಳು ಭಾಷಿಕರು ವಾಸಿಸುತ್ತಿದ್ದಾರೆ ಹಾಗೂ 2011 ರ ಜನಗಣತಿ ಪ್ರಕಾರ 18 ಲಕ್ಷ ಜನ ತುಳುವರು ಇದ್ದಾರೆ ಎಂದು ವರದಿಯಾಗಿದೆ.

Advertisement

ಪ್ರಸ್ತುತ ಒಟ್ಟು 25 ಲಕ್ಷಕ್ಕೂ ಹೆಚ್ಚು ಜನ ತುಳು ಭಾಷೆಯನ್ನು ಮಾತೃಭಾಷೆಯಾಗಿ ಮಾತನಾಡುವ ಜನರಿದ್ದಾರೆ, ತುಳುವರು ಕರ್ನಾಟಕ ರಾಜ್ಯದ ವಿವಿಧ ಊರುಗಳಲ್ಲಿ ವ್ಯಾಪಾರ ವಹಿವಾಟು ಸೇರಿದಂತೆ ಉದ್ಯೋಗದ ನಿಮಿತ್ತ ವಾಸಿಸುತ್ತಿದ್ದಾರೆ, ಹೊರ ದೇಶಗಳಲ್ಲಿಯೂ ತುಳುನಾಡಿನ ಹಲವಾರು ಜನರು ಉದ್ಯೋಗ ವ್ಯಾಪಾರದ ಉದ್ದೇಶದಿಂದ ನೆಲೆಸಿದ್ದಾರೆ.

ಹಲವಾರು ವರ್ಷಗಳಿಂದ ತುಳು ಭಾಷೆಯನ್ನು ಕರ್ನಾಟಕ ಸರ್ಕಾರ, ರಾಜ್ಯದ 2ನೇ ಅಧೀಕೃತ ಭಾಷೆಯನ್ನಾಗಿ ಹಾಗೂ ಕೇಂದ್ರ ಸರ್ಕಾರ ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸಬೇಕೆಂದು ಹಲವು ಹೋರಾಟಗಳು ಜರುಗಿದ್ದು, ತುಳುನಾಡಿನ ಹಿರಿಯರು ಆಗ್ರಹಿಸುತ್ತಾ ಬಂದಿರುತ್ತಾರೆ, ಈ ಹಿಂದೆ2013 ರಲ್ಲಿ ಮಂಗಳೂರು ಉತ್ತರ ಶಾಸಕರಾಗಿದ್ದ ಮೊಯಿಯುದ್ದೀನ್ ಬಾವ ಅವರು ಮೊದಲ ಬಾರಿಗೆ ವಿಧಾನಸಭಾ ಅಧಿವೇಶನದಲ್ಲಿ ತುಳು ಭಾಷೆಯನ್ನು ಅಧೀಕೃತ ಭಾಷಾ ಸ್ಥಾನ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ 8 ನೆ ಪರಿಚ್ಚೇದಕ್ಕೆ ಸೇರಿಸಲು ಆಗ್ರಹಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದನ್ನು ಹೋರಾಟದ ವೇದಿಕೆಯಲ್ಲಿ ಹರಿಕೃಷ್ಣ ಪುನರೂರು ಅವರು ಸ್ಮರಿಸಿದ್ದರು, ತದ ನಂತರ ತುಳುನಾಡು ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು ಅವರ ತಂಡ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ.

Advertisement

ಕಳೆದ 2022 ರಲ್ಲಿ ಕೇರಳದ ಕಣ್ಣೂರು ಮೂಲದ ಸಂದೋಶ್ ಕುಮಾರ್ ಎಂಬ CPIM ಪಕ್ಷದ ರಾಜ್ಯಸಭ ಸದಸ್ಯರು ಪಾರ್ಲಿಮೆಂಟ್ ನ ಅಧಿವೇಶನದಲ್ಲಿ ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಲು ಭಾರತ ಸರ್ಕಾರಕ್ಕೆ ಆಗ್ರಹಿಸಿ Private bill ಮಂಡಿಸಿ ಸರ್ಕಾರದ ಗಮನ ಸೆಳೆದಿದ್ದರು, ನಂತರದಲ್ಲಿ ಲೋಕಸಭೆಯಲ್ಲಿ ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಅವರು ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು, ಆ ಸಂಧರ್ಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಹ ಧ್ವನಿ ಎತ್ತಿದ್ದಾರೆ.

ಕಳೆದ ರಾಜ್ಯ ಸರ್ಕಾರದ ಅವಧಿಯಲ್ಲಿ ತುಳುನಾಡಿನವರೇ ಆದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಂಧರ್ಭದಲ್ಲಿ ತುಳು ಭಾಷೆಯನ್ನು 2 ನೆ ಅಧೀಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ನಿರೀಕ್ಷೆ ಸಹಜವಾಗಿಯೇ ಇದ್ದದ್ದು ಆದರೆ ಚುನಾವಣೆಗೆ ಕೆಲ ತಿಂಗಳುಗಳ ಹಿಂದೆ ಅಂದಿನ ರಾಜ್ಯ ಸರ್ಕಾರ ಮೋಹನ್ ಆಳ್ವ ಅವರ ನೇತೃತ್ವದ ಸಮಿತಿ ರಚಿಸಿ ಒಂದು ವಾರದ ಒಳಗೆ ವಿಸ್ತೃತ ವರದಿ ನೀಡುವಂತೆ ಸೂಚಿಸಿತ್ತು, ಇದರ ಅನ್ವಯ  ಮೋಹನ್ ಆಳ್ವ ಅವರು ಸಾರ್ವಜನಿಕರ ಹಾಗೂ ತುಳುನಾಡಿನ ಪ್ರಮುಖರ ಸಭೆ ಕರೆದು ಸಲಹೆ ಅಭಿಪ್ರಾಯ ಪಡೆದು ತುಳು ಭಾಷೆಗೆ ಅಧೀಕೃತ ಭಾಷಾ ಸ್ಥಾನ ನೀಡುವ ಹಾಗೂ 8 ನೇ ಪರಿಚ್ಚೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫ್ಫಾರಸ್ಸು ಮಾಡುವಂತೆ ಪೂರಕವಾದ ವರದಿ ನೀಡಿದ್ದರು.

ಆ ವರದಿಯನ್ನು ಹಿಂದಿನ ಸರ್ಕಾರ ಮಂಡನೆ ಮಾಡುವ ಮೊದಲೇ ಚುನಾವಣೆ ಘೋಷಣೆಯಾಯಿತು, ಪ್ರಸ್ತುತ ಸರ್ಕಾರ ಆ ವರದಿ ಪರಿಗಣಿಸಿ ಮಂಡನೆ ಮಾಡಲು ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ರೈ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು ಆದರೆ ಉಳಿದ ಶಾಸಕರ ವಿರೋಧದಿಂದಾಗಿ ಅವರಿಗೆ ತುಳು ಭಾಷೆಯಲ್ಲಿ ಮಾತನಾಡಲು ಅವಕಾಶ ಸಿಗದಂತೆ ಆಗಿದ್ದು ನಿಜಕ್ಕೂ ದುರ್ದೈವದ ಸಂಗತಿ, ತುಳುನಾಡಿನವರೆ ಆದ ಯುಟಿ ಖಾದರ್ ಅವರೇ ಇಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದು ಈ ಸಂದರ್ಭದಲ್ಲಿ ಅವರು ಸಹ ಸರ್ಕಾರಕ್ಕೆ ಈ ಕುರಿತಂತೆ ಆಗ್ರಹಿಸಿ ತುಳು ಭಾಷೆಗೆ ಅಧೀಕೃತ ಸ್ಥಾನ ದೊರಕಲು ಶ್ರಮಿಸಬೇಕಿದೆ.

ಇದರ ಮುಂದಿನ ಭಾಗವಾಗಿ ಜನವರಿ 29 ರಿಂದ ಪ್ರಾರಂಭಿಸಿ ಪತ್ರ ಅಭಿಯಾನ ನಡೆಸುತ್ತಿದ್ದು, ಈಗಾಗಲೇ ತುಳು ರಂಗಭೂಮಿ, ತುಳು ಚಲನಚಿತ್ರದ ಪ್ರಮುಖ ಗಣ್ಯರು ಬೆಂಬಲ ನೀಡಿದ್ದಾರೆ. ಪಕ್ಷಾತೀತವಾಗಿ ಜಾತಿ ಧರ್ಮಗಳನ್ನು ಮೀರಿ ಈ ಅಭಿಯಾನಕ್ಕೆ ತುಳುನಾಡಿನ ಎಲ್ಲಾ ಜನರು ಬೆಂಬಲಿಸಿ ಕನಿಷ್ಠ 10 ಸಾವಿರ ಪತ್ರಗಳನ್ನು ಮಾನ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರಿಗೆ, ಕನಿಷ್ಠ 10 ಸಾವಿರ ಪತ್ರಗಳು ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ವರಿಗೆ Registered Post ಮುಖಾಂತರ ಕಳುಹಿಸಿ ಕರ್ನಾಟಕ ವಿಧಾನಸಭಾ ಅಧಿವೇಶನ 12 ರಿಂದ ಪ್ರಾರಂಭ ಆಗುತ್ತಿದ್ದು, ಹಾಗೂ ಪಾರ್ಲಿಮೆಂಟ್ ಅಧಿವೇಶನ ಈಗಾಗಲೇ ನಡೆಯುತ್ತಿದೆ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಡ ಹೇರಿ ತುಳು ಭಾಷೆಯನ್ನು ಅಧೀಕೃತ ಭಾಷೆಯ ಸ್ಥಾನ ಹಾಗೂ 8 ನೇ ಪರಿಚ್ಚೇದಕ್ಕೆ ಸೇರಿಸಲು ಗೌರವಪೂರಕವಾಗಿ ಆಗ್ರಹಿಸಿ ನ್ಯಾಯ ಪಡಿಯಬೇಕು ಎಂಬುದು ತುಳುವರ ಮನವಿ. ಇನ್ನು ಖ್ಯಾತ ಸಂಗೀತ ನಿರ್ದೇಶ ಗುರುಕಿರಣ್‌, ತುಳು ಚಿತ್ರ ನಟ ನವೀಲ್‌ ಡಿ ಪಡೀಲ್‌, ವಿಜಯಕುಮಾರ್‌ ಕೋಡಿಯಾಲ್ ಬೈಲ್‌, ಭೋಜರಾಜ್‌ ವಾಮಾಂಜೂರು ಹಾಗೂ ಮಾಜಿ ಶಾಸಕ ಮೊಯ್ದೀನ್ ಬಾವ ಅವರು ಇದಕ್ಕೆ ಬೆಂಬಲ ಸೂಚಿಸಿ ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ಸಿಎಂಗೆ ಮನವಿ ಮಾಡಿದ್ದಾರೆ.

ಮೊಯ್ದೀನ್ ಬಾವ ಅವರ ಪತ್ರಗಳ ಮೂಲಕ ವಿಶೇಷವಾಗಿ ಈ ಅಭಿಯಾನವನ್ನು ಕೈಗೊಂಡಿದ್ದಾರೆ. ಹೀಗಾಗಿ ಕಳೆದ 10 ದಿನಗಳಲ್ಲಿ ಪತ್ರ ಅಭಿಯಾನಕ್ಕೆ ಬೆಂಬಲಿಸಿ ಕನಿಷ್ಠ 3 ಸಾವಿರ ಪತ್ರಗಳು Registered post ಮೂಲಕ ಕಳುಹಿಸಿ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ.

Advertisement
Tags :
Advertisement