For the best experience, open
https://m.newskannada.com
on your mobile browser.
Advertisement

2028ರಲ್ಲಿ ಸಿಒಪಿ ಆತಿಥ್ಯ ವಹಿಸಿಕೊಳ್ಳಲು ಪ್ರಧಾನಿ ಆಶಯ

ದುಬೈನಲ್ಲಿ ನಡೆದ ಸಿಒಪಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು 2028 ರಲ್ಲಿ ಭಾರತ ಸಿಒಪಿ33 ಆತಿಥ್ಯ ವಹಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.
06:44 PM Dec 01, 2023 IST | Gayathri SG
2028ರಲ್ಲಿ ಸಿಒಪಿ ಆತಿಥ್ಯ ವಹಿಸಿಕೊಳ್ಳಲು ಪ್ರಧಾನಿ ಆಶಯ

ದುಬೈ: ದುಬೈನಲ್ಲಿ ನಡೆದ ಸಿಒಪಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು 2028 ರಲ್ಲಿ ಭಾರತ ಸಿಒಪಿ33 ಆತಿಥ್ಯ ವಹಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.

Advertisement

ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದರತ್ತ ಕಾರ್ಯನಿರ್ವಹಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ದೇಶಗಳಿಗೂ ಕರೆ ನೀಡಿದ್ದಾರೆ. ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದರೆ ಜಗತ್ತಿನ ಶೇ.17 ರಷ್ಟು ಜನಸಂಖ್ಯೆ ಹೊಂದಿರುವ ಭಾರತ ಜಾಗತಿಕ ಇಂಗಾಲದ ಹೊರಸೂಸುವಿಕೆಗೆ ಶೇ.4ಕ್ಕಿಂತ ಕಡಿಮೆ ಕೊಡುಗೆ ನೀಡುತ್ತಿದೆ.

ಭಾರತ ಎನ್ ಡಿಸಿ ಟಾರ್ಗೆಟ್ ಗಳನ್ನು ಸಾಧಿಸುವಲ್ಲಿ ವೇಗವಾಗಿ ಸಾಗುತ್ತಿದೆ ಎಂದರು. 2028 ರಲ್ಲಿ ಭಾರತ ಸಿಒಪಿ33 ಆತಿಥ್ಯ ವಹಿಸಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ನಾವು ಪಳೆಯುಳಿಕೆಯಲ್ಲದ ಇಂಧನಕ್ಕೆ ಸಂಬಂಧಿಸಿದ ಗುರಿಗಳನ್ನು ಗಡುವಿನ 9 ವರ್ಷಗಳ ಮೊದಲೇ ತಲುಪಿದ್ದೇವೆ.

Advertisement

ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ರಾಷ್ಟ್ರೀಯ ಯೋಜನೆಗಳು ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಪ್ಪಿಸಲು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು ಸಾಧಿಸುವ ಹಾದಿಯಲ್ಲಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ.

Advertisement
Tags :
Advertisement