ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳಲಿದೆ  ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿಕೆಗೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ  ತಿರುಗೇಟು ನೀಡಿದ್ದಾರೆ.
07:28 AM Apr 24, 2024 IST | Ashika S

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳಲಿದೆ  ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿಕೆಗೆ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ  ತಿರುಗೇಟು ನೀಡಿದ್ದಾರೆ.

Advertisement

ನಗರ ಎಚ್ಎಸ್ಆರ್ ಲೇಔಟ್​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯಾರೆಡ್ಡಿ ಪರ ಪ್ರಚಾರ ವೇಳೆ ಮಾತನಾಡಿದ ಅವರು, ಮಹಿಳೆಯರ ಮನಸಿನಲ್ಲಿರುವ ಸೇವಾಭಾವನೆ ಬಿಜೆಪಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ. ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ  ಎಂದು ವಾಗ್ದಾಳಿ ಮಾಡಿದ್ದಾರೆ.

ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದ 609 ರೈತರು ಮೃತಪಟ್ಟರು. ಆಗ ಪ್ರಧಾನಿ ಮೋದಿಗೆ ಮಾಂಗಲ್ಯ ನೆನಪಾಗಲಿಲ್ವಾ? ಮಣಿಪುರದಲ್ಲಿ ಹೆಣ್ಣನ್ನು ಬೆತ್ತಲೆಮಾಡಿ ಮೆರವಣಿಗೆ ಮಾಡಿದ್ದರು ಆ ಸಂದರ್ಭದಲ್ಲಿ ಮೋದಿ ಎಲ್ಲಿದ್ರು? ಬಾಯಿಬಿಡಲಿಲ್ವಲ್ಲಾ? ದೇಶದ ಬಗ್ಗೆ ಕಿಂಚಿಂತೂ ಕಾಳಜಿಯಿಲ್ಲದ ಮೋದಿಗೆ ನಾಚಿಕೆ ಆಗ್ಬೇಕು.

Advertisement

ಅವರಿಗೆ ಮಹಿಳೆಯರ ಕಷ್ಟ ಅರ್ಥವಾಗಲ್ಲ. ರೈತರು ಸಾಲ ಹೆಚ್ಚಾದಾಗ ಮಹಿಳೆಯರು ಮಾಂಗಲ್ಯ ಅಡವಿಡುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಷ್ಟ ಬಂದರೆ ಮಾಂಗಲ್ಯ ಅಡವಿಡುತ್ತಾರೆ. ಅದರ ಬೆಲೆ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ. ನಿಮಗೆ ಪರೋಪಕಾರ ಬೇಕಾ? ಅಹಂಕಾರ ಬೇಕಾ? ಸುಳ್ಳು ಹೇಳುವವರು ಬೇಕಾ? ಸತ್ಯ ಹೇಳುವವರು ಬೇಕಾ? ನೈಜತೆ ಬೇಕಾ ನಾಟಕೀಯತೆ ಬೇಕಾ ನೀವೇ ತೀರ್ಮಾನ ಮಾಡಿ. ಬಿಜೆಪಿಯವರು ಕೇವಲ ಹಿಂದೂ, ಮುಸ್ಲಿಂ ಎಂದು ಕಿತ್ತಾಟ ತಂದಿಡ್ತಾರೆ. ಎಂದು ಹರಿಹಾಯ್ದಿದ್ದಾರೆ.

ದೇಶದಲ್ಲಿ ಇಂದು ಯಾವ ಪರಿಸ್ಥಿತಿ ಇದೆ ಎಂದು ನಿಮಗೆ ಗೊತ್ತು. ಬಹುದೊಡ್ಡ ಸಮಸ್ಯೆ ನಿರುದ್ಯೋಗ ಹಾಗೂ ಬೆಲೆ ಏರಿಕೆ. ಬೆಲೆ ಏರಿಕೆ ಆದಾಗ ಮಹಿಳೆಯರ ಮೇಲೆ ಕಷ್ಟ ಬೀಳುತ್ತೆ. ಡೀಸೆಲ್, ಪೆಟ್ರೋಲ್, ಗ್ಯಾಸ್​ ಸಿಲಿಂಡರ್ ದರ ಹೆಚ್ಚಾಗಿದೆ. ಮೋದಿ 10 ವರ್ಷದ ಆಡಳಿತದಲ್ಲಿ ನಿಮಗೇನು ಸಿಕ್ಕಿದೆ. ನಿತ್ಯ ಟಿವಿಯಲ್ಲಿ ಸೂಪರ್​ಮ್ಯಾನ್ ಇಮೇಜ್ ತೋರಿಸ್ತಾರೆ. ಮೋದಿ ಸೂಪರ್​ಮ್ಯಾನ್​ ಅಲ್ಲ, ಬೆಲೆ ಏರಿಕೆ ಮ್ಯಾನ್.​​ ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಯೇ ಆಗಿಲ್ಲ ಎಂದು ಹೇಳಿದ್ದಾರೆ.

Advertisement
Tags :
bengaluruLatetsNewsNewsKarnatakaPM MODIPriyanka gandhi
Advertisement
Next Article