For the best experience, open
https://m.newskannada.com
on your mobile browser.
Advertisement

ಬಡವರಿಗೆ ಮನೆ ಹಸ್ತಾಂತರದ ವೇಳೆ "ನನ್ನ ದೊಡ್ಡ ಸಂಪತ್ತು" ಎನ್ನುತ ಭಾವುಕರಾದ ಮೋದಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಇಂದು ಹಸ್ತಾಂತರಿಸಿದ ನಂತರ, ಸೋಲಾಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾದರು.
03:35 PM Jan 19, 2024 IST | Ashitha S
ಬಡವರಿಗೆ ಮನೆ ಹಸ್ತಾಂತರದ ವೇಳೆ  ನನ್ನ ದೊಡ್ಡ ಸಂಪತ್ತು  ಎನ್ನುತ ಭಾವುಕರಾದ ಮೋದಿ

ಸೊಲ್ಲಾಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಇಂದು ಹಸ್ತಾಂತರಿಸಿದ ನಂತರ, ಸೋಲಾಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾದರು.

Advertisement

ಹೌದು. . ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ಕುಟುಂಬಗಳ ಸಂತೋಷವೇ ನನ್ನ ದೊಡ್ಡ ಸಂಪತ್ತು ಎಂದು ಭಾವುಕರಾದರು. 'ನಾನು ಈ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ನನ್ನ ಬಾಲ್ಯದಲ್ಲಿ ನನಗೂ ಇಂತಹ ಮನೆಯಲ್ಲಿ ವಾಸಿಸುವ ಅವಕಾಶ ಸಿಕ್ಕಿದ್ದರೆ ಎಂದು ನಾನು ಅಂದುಕೊಳ್ಳುತ್ತಿದ್ದೆ' ಎನ್ನುವಾಗ ಮೋದಿ ಅವರ ಕಣ್ಣು ತುಂಬಿ ಬಂತು. ಜೊತೆಗೆ ಫಲಾನುಭವಿಗಳನ್ನುದ್ದೇಶಿಸಿ ಭಾವುಕರಾಗಿ ಈ ರೀತಿಯ ಅಭಿವೃದ್ಧಿ ಯೋಜನೆಗಳನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ ಎಂದರು.

ಸೊಲ್ಲಾಪುರದ ಸಾವಿರಾರು ಬಡವರು, ಕೂಲಿಕಾರ್ಮಿಕರಿಗಾಗಿ ನಾವು ತೆಗೆದುಕೊಂಡಿದ್ದ ವಾಗ್ದಾನ ಇಂದು ನೆರವೇರುತ್ತಿರುವುದು ಸಂತಸ ತಂದಿದೆ. ಈ ಯೋಜನೆಗೆ ಶಂಕುಸ್ಥಾಪನೆ ಮಾಡಲು ನಾನು ಇಲ್ಲಿಗೆ ಬಂದ ದಿನವೇ ನಾನು ಶೀಘ್ರದಲ್ಲೇ ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ನಿಮ್ಮ ಮನೆಗಳ ಕೀಲಿಗಳನ್ನು ನೀಡಿದ್ದೇನೆ. ಇಂದು ಮೋದಿ ಈ ಗ್ಯಾರಂಟಿಯನ್ನು ಈಡೇರಿಸಿದ್ದಾರೆ. ನೆನಪಿಡಿ, ಮೋದಿ ಗ್ಯಾರಂಟಿ ಎಂದರೆ 'ಗ್ಯಾರಂಟಿಯನ್ನು ಪೂರ್ಣಗೊಳಿಸುವ ಗ್ಯಾರಂಟಿ'! ಎಂದು ಅವರು ಹೇಳಿದರು.

Advertisement

ಮುಂದುವರೆದು ಮಾತನಾಡಿದ ಅವರು "ಜನವರಿ 22 ರಂದು ಜನರು ಬೆಳಗಿಸುವ ರಾಮ ಜ್ಯೋತಿ ಅವರ ಜೀವನದಿಂದ ಬಡತನವನ್ನು ತೊಡೆದುಹಾಕಲು ಸ್ಫೂರ್ತಿಯಾಗಲಿದೆ" ಎಂದು ಅವರು ಹೇಳಿದರು. ಹಾಗು ಬಡವರ ಕಲ್ಯಾಣ ಮತ್ತು ಸ್ವಾವಲಂಬನೆಯ ಪ್ರಾಮುಖ್ಯತೆಗೆ ಸರ್ಕಾರ ಬದ್ಧತೆಯನ್ನು ಪುನರುಚ್ಚರಿಸಿದರು.

Advertisement
Tags :
Advertisement