For the best experience, open
https://m.newskannada.com
on your mobile browser.
Advertisement

ಲಕ್ಷದ್ವೀಪದಲ್ಲಿ ಸ್ನಾರ್ಕೆಲಿಂಗ್ ತೆರಳಿದ 'ಪ್ರಧಾನಿ ಮೋದಿʼ: ಫೋಟೊ ಶೇರ್

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಸ್ನಾರ್ಕೆಲಿಂಗ್  ಮಾಡಲು ಪ್ರಯತ್ನಿಸಿದ್ದಾರೆ. ಹವಳಗಳು ಮತ್ತು ಮೀನುಗಳ ಚಿತ್ರಗಳನ್ನು ಹಂಚಿಕೊಂಡ ಪಿಎಂ ಮೋದಿ, 'ಸಾಹಸ ಪ್ರಿಯರಿಗೆ ಖಂಡಿತವಾಗಿಯೂ ತಮ್ಮ ಪಟ್ಟಿಯಲ್ಲಿ ಈ ಸ್ಥಳವನ್ನು ಸೇರಿಸಿಕೊಳ್ಳಿ' ಎಂದು ಸಲಹೆ ನೀಡಿದರು.
03:44 PM Jan 04, 2024 IST | Ashitha S
ಲಕ್ಷದ್ವೀಪದಲ್ಲಿ ಸ್ನಾರ್ಕೆಲಿಂಗ್ ತೆರಳಿದ  ಪ್ರಧಾನಿ ಮೋದಿʼ  ಫೋಟೊ ಶೇರ್

ನವದೆಹಲಿ: ಪ್ರಧಾನಿ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಸ್ನಾರ್ಕೆಲಿಂಗ್  ಮಾಡಲು ಪ್ರಯತ್ನಿಸಿದ್ದಾರೆ. ಹವಳಗಳು ಮತ್ತು ಮೀನುಗಳ ಚಿತ್ರಗಳನ್ನು ಹಂಚಿಕೊಂಡ ಪಿಎಂ ಮೋದಿ, "ಸಾಹಸ ಪ್ರಿಯರಿಗೆ ಖಂಡಿತವಾಗಿಯೂ ತಮ್ಮ ಪಟ್ಟಿಯಲ್ಲಿ ಈ ಸ್ಥಳವನ್ನು ಸೇರಿಸಿಕೊಳ್ಳಿ" ಎಂದು ಸಲಹೆ ನೀಡಿದರು.

Advertisement

ಪ್ರಧಾನಿ ಮೋದಿ, "ತಮ್ಮಲ್ಲಿರುವ ಸಾಹಸಿಯನ್ನು ಅಪ್ಪಿಕೊಳ್ಳಲು ಬಯಸುವವರಿಗೆ, ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿ ಸೇರಿಸಬೇಕು. ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕೆಲಿಂಗ್  ಸಹ ಪ್ರಯತ್ನಿಸಿದೆ. ಅದು ಎಂತಹ ಆಹ್ಲಾದಕರ ಅನುಭವವಾಗಿತ್ತು" ಎಂದು ಪ್ರಧಾನಿ  ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ನಾರ್ಕ್ಲಿಂಗ್ ಎಂಬುದು ಜಲರಾಶಿಯ ಮೂಲಕ ಅಥವಾ ಅದರ ಮೇಲೆ ,ನೇರವಾಗಿ ನೀರಿಗಿಳಿಯುವ ಡೈವಿಂಗ್ ಮುಖವಾಡ ಧರಿಸಿಕೊಂಡು ಈಜುವುದನ್ನು ಅಭ್ಯಾಸ ಮಾಡುವುದಾಗಿದೆ. ಈ ಡೈವಿಂಗ್ ಮುಖವಾಡವನ್ನು ಕೊಳವೆಯಾಕಾರದಲ್ಲಿರುವ ಉಸಿರುಕೊಳವೆ ಎಂದು ಕರೆಯಲಾಗುತ್ತದೆ. ಅಲ್ಲದೇ ಈಜು ರೆಕ್ಕೆಗಳು ಎಂದೂ ಕರೆಯಲಾಗುತ್ತದೆ.

Advertisement

Advertisement
Tags :
Advertisement