For the best experience, open
https://m.newskannada.com
on your mobile browser.
Advertisement

ದೇಶದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್  ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಸೇತುವೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನ ಇಡಲಾಗಿದೆ. 21.8 ಕಿ.ಮೀ ಉದ್ದದ ಆರು ಪಥದ ಸೇತುವೆಯನ್ನು 18,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
04:39 PM Jan 12, 2024 IST | Ashitha S
ದೇಶದ ಅತಿ ಉದ್ದದ ಸಮುದ್ರ ಸೇತುವೆ  ಅಟಲ್ ಸೇತು  ಉದ್ಘಾಟಿಸಿದ ಪ್ರಧಾನಿ ಮೋದಿ

ವದೆಹಲಿ: ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್  ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಸೇತುವೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನ ಇಡಲಾಗಿದೆ. 21.8 ಕಿ.ಮೀ ಉದ್ದದ ಆರು ಪಥದ ಸೇತುವೆಯನ್ನು 18,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

Advertisement

ತಪೋವನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಯುವ ಮಹೋತ್ಸವವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಇಂದು ಭಾರತದ ಯುವ ಶಕ್ತಿಯ ದಿನ. ಗುಲಾಮಗಿರಿಯ ದಿನಗಳಲ್ಲಿ ಭಾರತವನ್ನ ಹೊಸ ಶಕ್ತಿಯಿಂದ ತುಂಬಿದ ಮಹಾನ್ ವ್ಯಕ್ತಿಗೆ ಈ ದಿನವನ್ನ ಅರ್ಪಿಸಲಾಗಿದೆ.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ಇಲ್ಲಿಗೆ ಬಂದಿರುವುದು ನನಗೆ ಸಂತೋಷ ತಂದಿದೆ. ರಾಷ್ಟ್ರೀಯ ಯುವ ದಿವಸದ ಶುಭಾಶಯಗಳು. ಇಂದು ಭಾರತದ 'ನಾರಿ ಶಕ್ತಿ'ಯ ಸಂಕೇತವಾದ ರಾಜಮಾತಾ ಜೀಜಾ ಬಾಯಿ ಅವರ ಜನ್ಮದಿನ" ಎಂದರು.

Advertisement

ಇನ್ನು ಈ ಸೇತುವೆಯ ಉದ್ದವು ಸಮುದ್ರದಲ್ಲಿ ಸುಮಾರು 16.5 ಕಿಮೀ ಮತ್ತು ನೆಲದ ಮೇಲೆ ಸುಮಾರು 5.5 ಕಿಮೀ.ಸಾಗುತ್ತದೆ. ಸೇತುವೆಯ ಉದ್ಘಾಟನೆಯೊಂದಿಗೆ ಮುಂಬೈನಲ್ಲಿ ಸಂಚಾರ ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ಇದರ ಲೋಕಾರ್ಪಣೆಯೊಂದಿಗೆ ದಕ್ಷಿಣ ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣವು 2 ಗಂಟೆಯಿಂದ 20 ನಿಮಿಷಗಳಿಗೆ ಕಡಿತವಾಗುತ್ತದೆ. ಮುಂಬೈನ ಆರ್ಥಿಕ ಅಭಿವೃದ್ಧಿಯಲ್ಲಿಯೂ ಈ ಸೇತುವೆ ಪ್ರಮುಖ ಪಾತ್ರ ವಹಿಸಲಿದೆ. ಇದರೊಂದಿಗೆ ರಾಯಗಢದ ಕೈಗಾರಿಕಾ ವಲಯವನ್ನು ಸುಲಭವಾಗಿ ತಲುಪಬಹುದು.

ಸೇತುವೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಆಧಾರದ ಮೇಲೆ ನಿರ್ಮಿಸಲಾಗಿದೆ. ಸೇತುವೆಯನ್ನು ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಕಾರ್ಪೊರೇಷನ್ (MTHL) ನಿರ್ವಹಿಸುತ್ತದೆ. ಈ ಸೇತುವೆಯ ಉದ್ಘಾಟನೆಯೊಂದಿಗೆ ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣಕ್ಕೆ ಪ್ರಯಾಣವೂ ಸುಲಭವಾಗುತ್ತದೆ. ಇದರ ಮೇಲೆ, ಕಾರುಗಳು ಗಂಟೆಗೆ ಗರಿಷ್ಠ 100 ಕಿಮೀ ವೇಗದಲ್ಲಿ ಚಲಿಸುವುದು  ಸಾಧ್ಯವಾಗುತ್ತದೆ.

ಇನ್ನು MTHL ಮೂಲಕ ಪ್ರಯಾಣಿಸಿದರೆ, ಒನ್ ವೆ ಪ್ರಯಾಣಕ್ಕಾಗಿ 250 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ. ರೌಂಡ್ ಟ್ರಿಪ್ ಗೆ 375 ರೂ.ನೀಡಬೇಕಾಗುತ್ತದೆ. ಒಂದು ವರ್ಷದ ನಂತರ ಟೋಲ್ ಮರುಪರಿಶೀಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಪ್ರಸ್ತುತ, ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ 85 ರೂ. ಮತ್ತು ರೌಂಡ್ ಟ್ರಿಪ್‌ಗೆ 127 ರೂ. ಟೋಲ್ ಪಾವತಿಸಬೇಕಾಗುತ್ತದೆ. MTHL ನಲ್ಲಿ ಬೈಕ್‌, ಆಟೋ ಮತ್ತು ಟ್ರ್ಯಾಕ್ಟರ್‌ಗಳ ಸಂಚಾರ ನಿಷೇಧಿಸಲಾಗಿದೆ

Advertisement
Tags :
Advertisement