For the best experience, open
https://m.newskannada.com
on your mobile browser.
Advertisement

ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಇಂದು (ಜ.17) ಬೆಳಗ್ಗೆ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
11:03 AM Jan 17, 2024 IST | Ashitha S
ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಕೇರಳ: ಪ್ರಧಾನಿ ಮೋದಿ ಅವರು ಇಂದು (ಜ.17) ಬೆಳಗ್ಗೆ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಮೋದಿ ಅವರು ಸಾಂಪ್ರದಾಯಿಕ ಬಿಳಿ ಪಂಚೆ ಮತ್ತು ಶಾಲು ಧರಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ದೇವಾಲಯದ ಸುತ್ತ-ಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

Advertisement

ಬಳಿಕ ಉಡುಪನ್ನು ಬದಲಾಯಿಸಿ, ನಟ, ರಾಜಕಾರಣಿ ಸುರೇಶ್‌ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ.

ಹೌದು. . ಮಲಯಾಳಂ ಖ್ಯಾತ ನಟ, ರಾಜ್ಯಸಭಾ ಮಾಜಿ ಸಂಸದ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಸುರೇಶ್ -ಶ್ರೇಯಸ್ ಮೋಹನ್ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ.

Advertisement

ಅತ್ಯಂತ ಮಾದರಿಯಾಗಿ ನಡೆದ ಮದುವೆಯಲ್ಲಿ ಪಾಳ್ಗೊಂಡಿದ್ದ ಮೋದಿ, ವಧುವರರಿಗೆ ಶುಭ ಕೋರಿದರು. ಇದೇ ವೇಳೆ ದೇವಸ್ಥಾನದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಳಿದ ಜೋಡಿಗೂ ಮೋದಿ ಶುಭ ಹಾರೈಸಿದರು.

ಗುರುವಾಯೂರ್ ಶ್ರೀಕೃಷ್ಣ ದೇಗುಲದಲ್ಲಿ ನಡೆದ ವಿವಾಹಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರಾದ ಮೋಹನ್ ಲಾಲ್, ಮಮ್ಮುಟ್ಟಿ, ದಿಲೀಪ್, ಬಿಜು ಮೆನನ್, ಜಯರಾಂ, ಪಾರ್ವತಿ, ಖುಷ್ಬೂ, ಶಾಜಿ ಕೈಲಾಸ್, ಹರಿಹರನ್, ರಚನಾ ನಾರಾಯಣನ್ ಕುಟ್ಟಿ, ಸರಯೂ ಭಾಗಿ ಮೊದಲಾದವರು ಆಗಮಿಸಿದ್ದರು.

Advertisement
Tags :
Advertisement