ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಮೇರಿಕನ್ ನಟ ಮೈಕೆಲ್ ಭಾರತಕ್ಕೆ ಭೇಟಿ: ಫೋಟೋ ಶೇರ್‌ ಮಾಡಿದ ಮೋದಿ

ಅಮೇರಿಕನ್ ನಟರಾದ ಮೈಕೆಲ್ ಡೌಗ್ಲಾಸ್ ಮತ್ತು ಕ್ಯಾಥರೀನ್ ಝೀಟಾ-ಜೋನ್ಸ್ ಅವರು ತಮ್ಮ ಮಗ ಡೈಲನ್ ಜೊತೆಗೆ ಇತ್ತೀಚೆಗೆ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಅವರು ತಮಿಳುನಾಡಿನ ತಂಜಾವೂರಿಗೆ ಭೇಟಿ ನೀಡಿದ್ದರು.
10:04 AM Dec 11, 2023 IST | Ashitha S

ನವದೆಹಲಿ: ಅಮೇರಿಕನ್ ನಟರಾದ ಮೈಕೆಲ್ ಡೌಗ್ಲಾಸ್ ಮತ್ತು ಕ್ಯಾಥರೀನ್ ಝೀಟಾ-ಜೋನ್ಸ್ ಅವರು ತಮ್ಮ ಮಗ ಡೈಲನ್ ಜೊತೆಗೆ ಇತ್ತೀಚೆಗೆ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಅವರು ತಮಿಳುನಾಡಿನ ತಂಜಾವೂರಿಗೆ ಭೇಟಿ ನೀಡಿದ್ದರು.

Advertisement

ಡೌಗ್ಲಾಸ್ ಅವರು ತಮ್ಮ ಕುಟುಂಬದೊಂದಿಗೆ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದವನ್ನು "ಉತ್ತಮವಾದ ದೃಶ್ಯವೀಕ್ಷಣೆ" ಎಂದು ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅವರು ತಮ್ಮ ಪ್ರಾರ್ಥನೆ ಸಲ್ಲಿಸಿದ ನಂತರ ದೇವಾಲಯದ ಒಳಗಿನಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂವರೂ ಕೊರಳಲ್ಲಿ ಹೂವಿನ ಹಾರ ಹಾಕಿಕೊಂಡು ಪೋಸ್ ಕೊಡುವುದನ್ನು ಕಾಣಬಹುದು.

Advertisement

ಈ ಪೋಸ್ಟ್ ಪ್ರಧಾನಿ ಮೋದಿಯವರ ಗಮನ ಸೆಳೆದಿದ್ದು, ಅವರು ಡೌಗ್ಲಾಸ್ ಅವರ ಪೋಸ್ಟ್ ಅನ್ನು ಹಂಚಿಕೊಂಡು, "ತಂಜಾವೂರು ನಿಜವಾಗಿಯೂ ಸುಂದರವಾಗಿದೆ! ಮತ್ತು ಭಾರತದಲ್ಲಿ ನೋಡಲು ಇನ್ನೂ ಬಹಳಷ್ಟು ಇದೆ, ಇದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಮೋಡಿಮಾಡುತ್ತದೆ" ಎಂದು ಬರೆದುಕೊಂಡಿದ್ದಾರೆ.

Advertisement
Tags :
GOVERNMENTindiaLatestNewsNewsKannadaನಟ ಮೈಕೆಲ್ನವದೆಹಲಿ
Advertisement
Next Article