For the best experience, open
https://m.newskannada.com
on your mobile browser.
Advertisement

ಮಕ್ಕಳಲ್ಲಿ ನ್ಯುಮೋನಿಯಾ ಆತಂಕ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಚೀನಾದಲ್ಲಿ ಮಕ್ಕಳ ಉಸಿರಾಟದ ಕಾಯಿಲೆಯ ಉಲ್ಬಣ ಪ್ರಕರಣವನ್ನು ಗಮನಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಇನ್ಫ್ಲುಯೆನ್ಸ (ಶೀತ ಜ್ವರ) ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ತಯಾರಿಯನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.
07:32 AM Dec 01, 2023 IST | Ashitha S
ಮಕ್ಕಳಲ್ಲಿ ನ್ಯುಮೋನಿಯಾ ಆತಂಕ  ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಚೀನಾದಲ್ಲಿ ಮಕ್ಕಳ ಉಸಿರಾಟದ ಕಾಯಿಲೆಯ ಉಲ್ಬಣ ಪ್ರಕರಣವನ್ನು ಗಮನಿಸಿ,  ರಾಝ್ಯದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಆತಂಕ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಇನ್ಫ್ಲುಯೆನ್ಸ (ಶೀತ ಜ್ವರ) ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ತಯಾರಿಯನ್ನು ಪೂರ್ವಭಾವಿಯಾಗಿ ಪರಿಶೀಲಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.

Advertisement

ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲಾ ಡೋಸ್‌ಗಳ ಒಸಾಮಿವಿ‌ ಟ್ಯಾಬ್ಲೆಟ್ ಗಳು, ಇತರ ಅಗತ್ಯ ಔಷಧಗಳು ಮತ್ತು ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ PPE ಗಳು ಸಾಕಷ್ಟು ಪಮಾಣದಲ್ಲಿ ದಾಸ್ತಾನು ಇರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.

ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಮುಖಗವಸು ಧರಿಸುವುದನ್ನು ಖಚಿತಪಡಿಸಿಕೊಳ್ಳುವುದು.

Advertisement

ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸಲು ಗೊತ್ತುಪಡಿಸಿದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ವಿಶೇಷವಾಗಿ ಮಕ್ಕಳಲ್ಲಿ ಮತ್ತು ಹಿರಿಯ ನಾಗರಿಕರಲ್ಲಿ ನ್ಯುಮೋನಿಯಾದ ಕಾರಣದಿಂದ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ನಿಭಾಯಿಸಲು ಹಾಗೂ ಆಸ್ಪತ್ರೆಯ ಸನ್ನದ್ಧತೆಯನ್ನು ನಿರ್ಣಯಿಸಲು ತಕ್ಷಣವೇ ಸ್ವಯಂ-ಪರಿಶೋಧನೆ ಮಾಡಿ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ/ಅರೆವೈದ್ಯಕೀಯ ಮಾನವಶಕ್ತಿ, ಆಮ್ಲಜನಕ ಹಾಸಿಗೆಗಳು, ಪ್ರತ್ಯೇಕ ಹಾಸಿಗೆಗಳು, ವಂಟಿಲೇಟರ್‌ಗಳು, ಪಿಎಸ್‌ಎ ಸ್ಥಾವರಗಳು, LMO ಸ್ಥಾವರಗಳು, ಆಮ್ಲಜನಕದ ಸಾಂದ್ರಕಗಳು, ಆಮ್ಲಜನಕ ಸಿಲಿಂಡರ್‌ಗಳು ಹಾಗೂ ಔಷಧಗಳು, PPE ಕಿಟ್‌ಗಳು, N-95 ವೈದ್ಯಕೀಯ ಮಾಸ್ಕ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ಲ್ಯಾಬ್ ಸೌಲಭ್ಯಗಳು, ಆಂಬ್ಯುಲೆನ್ಸ್ಗಳು ಇತ್ಯಾದಿಗಳ ಮೌಲ್ಯಮಾಪನ ಮಾಡುವುದು.

ಕೋವಿಡ್ ಋಣಾತ್ಮಕ ಪರೀಕ್ಷಾ ವರದಿ ಇರುವ ಎಲ್ಲಾ SARI ಸಾವಿನ ಪ್ರಕರಣಗಳಿಂದ ಮಾದರಿಗಳನ್ನು ಸಂಗ್ರಹಿಸಿ ಹತ್ತಿರದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ(VRDL)ನಲ್ಲಿ ಇನ್ನು ಯನ್ನ, SARS-Cov2 ಮತ್ತು ಅಡನೊವೈರಸ್ ಪರೀಕ್ಷೆಗಳಿಗೊಳಪಡಿಸುವುದು.

ಎಲ್ಲಾ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳು. IHIP ಪೋರ್ಟಲ್‌ನಲ್ಲಿ ಪರೀಕ್ಷಾ ಡೇಟಾವನ್ನು ಕಡ್ಡಾಯವಾಗಿ ವರದಿ ಮಾಡುವಂತೆ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದೆ.

Advertisement
Tags :
Advertisement