For the best experience, open
https://m.newskannada.com
on your mobile browser.
Advertisement

ಕವನ ವಾಚನ ವೇಳೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ ಕವಿ: ವಿಡಿಯೋ ವೈರಲ್‌

ಕವನ ವಾಚನದ ವೇಳೆ ಕವಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಕವನ ವಾಚಿಸುವಾಗ ಹೃದಯಾಘಾತದಿಂದ 75 ವರ್ಷದ ಕವಿ ಇಹಲೋಕ ತ್ಯಜಸಿದ್ದಾರೆ.
11:24 AM Jan 30, 2024 IST | Ashitha S
ಕವನ ವಾಚನ ವೇಳೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ ಕವಿ  ವಿಡಿಯೋ ವೈರಲ್‌

ಉತ್ತರಾಖಂಡ: ಕವನ ವಾಚನದ ವೇಳೆ ಕವಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಕವನ ವಾಚಿಸುವಾಗ ಹೃದಯಾಘಾತದಿಂದ 75 ವರ್ಷದ ಕವಿ ಇಹಲೋಕ ತ್ಯಜಸಿದ್ದಾರೆ.

Advertisement

ಜ.28 ರಂದು ಪಂತನಗರ ಕೃಷಿ ವಿಶ್ವವಿದ್ಯಾಲಯದ ಡಾ.ಬಿ.ಬಿ.ಸಿಂಗ್ ಸಭಾಂಗಣದಲ್ಲಿ ಕವಿಗೋಷ್ಠಿ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕವಿ ಸುಭಾಷ್ ಚತುರ್ವೇದಿ ವೇದಿಕೆಯಲ್ಲಿ ಕವನ ವಾಚನ ಮಾಡುತ್ತಿದ್ದರು.

ಕವಿತೆ ಓದುತ್ತಿರುವಾಗ ಸುಭಾಷ್ ಚತುರ್ವೇದಿ ಮೈಕ್ ಸಮೇತ ಹಿಂದೆ ಬೀಳುತ್ತಾರೆ. ವೇದಿಕೆ ಮೇಲೆ ಕವಿ ಬಿದ್ದ ತಕ್ಷಣ ಗದ್ದಲ ಉಂಟಾಯಿತು. ಕವಿ ಸುಭಾಷ್ ಚತುರ್ವೇದಿ ಅವರನ್ನು ವೇದಿಕೆಯಿಂದ ಕರೆದೊಯ್ದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಯಲ್ಲಿ ಕವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

Advertisement

Advertisement
Tags :
Advertisement