For the best experience, open
https://m.newskannada.com
on your mobile browser.
Advertisement

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ತಿರುಗೇಟು ನೀಡಿದರು. ಪ್ರಧಾನಿ ಮೋದಿ ಸರ್ಕಾರಕ್ಕೆ ಬಾಂಬ್​ ಎಂದರೆ ಭಯವೇನು ಇಲ್ಲ.
09:33 AM May 20, 2024 IST | Ashitha S
ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ  ಗೃಹ ಸಚಿವ ಅಮಿತ್ ಶಾ

ವದೆಹಲಿ: ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ತಿರುಗೇಟು ನೀಡಿದರು. ಪ್ರಧಾನಿ ಮೋದಿ ಸರ್ಕಾರಕ್ಕೆ ಬಾಂಬ್​ ಎಂದರೆ ಭಯವೇನು ಇಲ್ಲ.

Advertisement

ಪಾಕ್​ ಆಕ್ರಮಿತ ಕಾಶ್ಮೀರ ನಮ್ಮದು, ಅದನ್ನು ನಾವು ವಾಪಸ್​ ವಶಕ್ಕೆ ಪಡೆದೇ ಪಡೆಯುತ್ತೇವೆ ಎಂದರು. ಝಾನ್ಸಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್​ ಶಾ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಅಣುಬಾಂಬ್‌ಗಳಿಗೆ ಹೆದರುವುದಿಲ್ಲ
ಕಾಂಗ್ರೆಸ್ ವೋಟ್ ಬ್ಯಾಂಕಿನ ದುರಾಸೆ ಎಷ್ಟು ಮಟ್ಟಿಗೆ ಹೆಚ್ಚಿದೆ ಎಂದರೆ ಅವರ ನಾಯಕರಾದ ಮಣಿಶಂಕರ್ ಅಯ್ಯರ್ ಅವರು ಪಿಒಕೆ ಬಗ್ಗೆ ಮಾತನಾಡಬೇಡಿ ಎಂದು ಕೇಳಿಕೊಂಡರು. ಪಾಕಿಸ್ತಾನವು ಪರಮಾಣು ಬಾಂಬ್‌ಗಳನ್ನು ಹೊಂದಿದೆ. ಹಾಗಾಗಿ ನಾವು ಪಿಒಕೆ ಬಗ್ಗೆ ಮಾತನಾಡಬಾರದು ಅಂತ ಹೇಳುತ್ತಾರೆ. ಭಾರತದಲ್ಲಿರುವುದು ನರೇಂದ್ರ ಮೋದಿ ಸರ್ಕಾರ, ನಾವು ಅಣುಬಾಂಬ್‌ಗಳಿಗೆ ಹೆದರುವುದಿಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಪಿಒಕೆ ಭಾರತಕ್ಕೆ ಸೇರಿದ್ದು, ಅದನ್ನು ಹಿಂಪಡೆಯುತ್ತೇವೆ ಎಂದು ತಿರುಗೇಟು ನೀಡಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಆರು ತಿಂಗಳೊಳಗೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಲಿದೆ ಎಂದು ನಿನ್ನೆಯಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು. ಇಂದು ಅಮಿತ್​ ಶಾ ಸಹ ಅದೇ ಹೇಳಿಕೆಯನ್ನು ನೀಡಿದ್ದಾರೆ.

Advertisement
Tags :
Advertisement