For the best experience, open
https://m.newskannada.com
on your mobile browser.
Advertisement

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಿದ್ದುದು ಪತ್ತೆಯಾಗಿದೆ. ತೆಲುಗು ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದುದು ಕಂಡುಬಂದಿದೆ.
08:23 AM May 20, 2024 IST | Nisarga K
ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ   ತೆಲುಗು ನಟಿ  ಮಾಡೆಲ್​ ಸಿಸಿಬಿ ವಶಕ್ಕೆ
ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಬೆಂಗಳೂರು: ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಿದ್ದುದು ಪತ್ತೆಯಾಗಿದೆ. ತೆಲುಗು ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದುದು ಕಂಡುಬಂದಿದೆ.

Advertisement

ರೇವ್​ ಪಾರ್ಟಿಯಲ್ಲಿ ಮಾದಕವಸ್ತು ಎಂಡಿಎಂಎ ಮತ್ತು ಕೊಕೇನ್ ಪತ್ತೆಯಾಗಿದಲ್ಲದೆ, ಆಂಧ್ರ ಹಾಗೂ ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಪತ್ತೆಯಾಗಿದ್ದಾರೆ. ತೆಲುಗು ಸಿನಿರಂಗದ ಕಿರುತೆರೆ ಹಾಗೂ ಸಿನಿಮಾ ನಟಿಯರು ಸೇರಿದಂತೆ 25ಕ್ಕೂ ಹೆಚ್ಚು ಯುವತಿಯರು ಕಾಣಿಸಿಕೊಂಡಿದ್ದಾರೆ.

Advertisement

ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಂದ ಈ ದಾಳಿ ನಡೆದಿದೆ. ತಡರಾತ್ರಿ ಎರಡು ಘಂಟೆ ದಾಟಿದ್ರು ಪಾರ್ಟಿ ನಡೆಯುತ್ತಿತ್ತು. ಅವಧಿ ಮೀರಿ ಪಾರ್ಟಿ ಮಾಡಿದ್ದಲ್ಲದೆ, ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ.ಆಯೋಜಕರು ಪಾರ್ಟಿಗೆ ಆಂಧ್ರದಿಂದ ವಿಮಾನದಲ್ಲಿ ಯುವಕ ಯುವತಿಯರನ್ನು ಕರೆಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ ಎಂದು ಬೆಳಕಿಗೆ ಬಂದಿದೆ.

ಇನ್ನು ಒಂದು ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್ಎ ಪಾಸ್ ಪತ್ತೆಯಾಗಿದೆ. ಎಂಎಲ್ಎ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿನ ಪಾಸ್ ಪತ್ತೆಯಾಗಿದೆ.ರೇವ್ ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್​ಗಳು ಹಾಗೂ ಟೆಕ್ಕಿಗಳು ಪತ್ತೆಯಾಗಿದ್ದಾರೆಪಾರ್ಟಿಯಲ್ಲಿ ತೆಲುಗು ಸಿನಿರಂಗದ ಕಿರುತೆರೆ ಹಾಗೂ ಸಿನಿಮಾ ನಟಿಯರು ಭಾಗಿಯಾಗಿದ್ದಾರೆ. ನಟಿ ಹೇಮಾ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪಾರ್ಟಿಯಲ್ಲಿ ಭಾಗಿಯಾಗಿದ್ದ ಐವತ್ತಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement
Tags :
Advertisement