For the best experience, open
https://m.newskannada.com
on your mobile browser.
Advertisement

ಉಕ್ರೇನ್‌ ಅಧ್ಯಕ್ಷನ ಹತ್ಯೆಗೈಯ್ಯಲು ರಷ್ಯಾಗೆ ಸಹಕರಿಸುತ್ತಿದ್ದ ಪೋಲೆಂಡ್‌ ಪ್ರಜೆ ಬಂಧನ

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿಯನ್ನು ಹತ್ಯೆ ಮಾಡಲು ರಷ್ಯಾದ ಗುಪ್ತಚರ ಸಂಸ್ಥೆಗಳಿಗೆ ನೆರವಾದ ಪೋಲೆಂಡ್‌ ಪ್ರಜೆಯನ್ನು ಬಂಧಿಸಲಾಗಿದೆ.
06:57 PM Apr 19, 2024 IST | Maithri S
ಉಕ್ರೇನ್‌ ಅಧ್ಯಕ್ಷನ ಹತ್ಯೆಗೈಯ್ಯಲು ರಷ್ಯಾಗೆ ಸಹಕರಿಸುತ್ತಿದ್ದ ಪೋಲೆಂಡ್‌ ಪ್ರಜೆ ಬಂಧನ

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿಯನ್ನು ಹತ್ಯೆ ಮಾಡಲು ರಷ್ಯಾದ ಗುಪ್ತಚರ ಸಂಸ್ಥೆಗಳಿಗೆ ನೆರವಾದ ಪೋಲೆಂಡ್‌ ಪ್ರಜೆಯನ್ನು ಬಂಧಿಸಲಾಗಿದೆ.

Advertisement

ಬಂಧಿತನನ್ನು ಪಾವೆಲ್.ಕೆ ಎಂದು ಗುರುತಿಸಲಾಗಿದ್ದು, ಈತ ವಿಮಾನ ನಿಲ್ದಾಣದ ಮಾಹಿತಿಗಳನ್ನು ರಷ್ಯಾದ ಏಜೆಂಟ್‌ಗಳೊಂದಿಗೆ ಹಂಚಿಕೊಂಡಿರುವುದಾಗಿ ಆರೋಪಿಸಲಾಗಿದೆ.

ಉಕ್ರೇನ್‌ ಯುದ್ಧದಲ್ಲಿ ಪಾಲ್ಗೊಂಡಿರುವ ರಷ್ಯನ್ನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದ ಈತ, ಉಕ್ರೇನ್‌ನ ಗಡಿಯ ಸಮೀಪವಿರುವ ಪೋಲೆಂಡ್‌ನ ದಕ್ಷಿಣ-ಪೂರ್ವ ವಿಮಾನನಿಲ್ದಾಣದ ಮಾಹಿತಿಯನ್ನು ಹಂಚಿಕೊಳ್ಳುವ ಸಮಚು ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ವಿಮಾನನಿಲ್ದಾಣವು ಅಂತರ್ರಾಷ್ಟ್ರೀಯ ಮಿಲಿಟರಿ ಹಾಗು ಮಾನವೀಯ ನೆರವು ಒದಗಿಸಲು ಅಗತ್ಯವಾಗಿದ್ದು, ಅಧ್ಯಕ್ಷ ಜೆಲೆನ್ಸ್ಕಿ ಸೇರಿದಂತೆ ಅಂತರ್ರಾಷ್ಟ್ರೀಯ ನಾಯಕರು, ನೌಕರರು ಇದರ ಮೂಲಕ ಪ್ರಯಾಣಿಸುತ್ತಿದ್ದರು.

Advertisement
Tags :
Advertisement