For the best experience, open
https://m.newskannada.com
on your mobile browser.
Advertisement

ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಮತಾಂತರ ಅಟ್ಟಹಾಸ ಮಿತಿ ಮೀರಿದೆ: ಸುನಿಲ್ ಕುಮಾರ್

ರಾಜ್ಯದಲ್ಲಿ ಮಿತಿಮೀರಿದ ಮತಾಂತರ ಅಟ್ಟಹಾಸ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮತಾಂಧ ದುರುಳರು ಕಾನೂನಿನ ಭಯವೇ ಇಲ್ಲದೇ ರಾಜಾರೋಷವಾಗಿ ಕೊಲೆ, ದೊಂಬಿ, ನೈತಿಕ ಪೊಲೀಸ್ ಗಿರಿ, ದೇಶ ವಿರೋಧಿ ಘೋಷಣೆಗಳು ಮೇರೆ ಮೀರಿದೆ.
10:12 AM Apr 20, 2024 IST | Ashika S
ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಮತಾಂತರ ಅಟ್ಟಹಾಸ ಮಿತಿ ಮೀರಿದೆ  ಸುನಿಲ್ ಕುಮಾರ್

ಕಾರ್ಕಳ: ರಾಜ್ಯದಲ್ಲಿ ಮಿತಿಮೀರಿದ ಮತಾಂತರ ಅಟ್ಟಹಾಸ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮತಾಂಧ ದುರುಳರು ಕಾನೂನಿನ ಭಯವೇ ಇಲ್ಲದೇ ರಾಜಾರೋಷವಾಗಿ ಕೊಲೆ, ದೊಂಬಿ, ನೈತಿಕ ಪೊಲೀಸ್ ಗಿರಿ, ದೇಶ ವಿರೋಧಿ ಘೋಷಣೆಗಳು ಮೇರೆ ಮೀರಿದೆ.

Advertisement

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಕುಲಕರ್ಣಿ ಎಂಬ ಯುವತಿಯನ್ನು ಮತಾಂದ ವ್ಯಕ್ತಿ ಬರ್ಬರವಾಗಿ ಹತ್ಯೆಗೆದ ಪ್ರಕರಣ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದೆ. ಮತಾಂಧ ಜಿಹಾದಿಗಳ ಈ ಹೀನ ಮನಸ್ಥಿತಿಗೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ಬಿಜೆಪಿ ಜನಸೇವಾ ಕಚೇರಿ ವಿಕಾಸದಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಹುಬ್ಬಳಿಯಲ್ಲಿ ನಡೆದ ಈ ಬರ್ಬರ ಹತ್ಯೆ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೊಲೆಯಲ್ಲ ಬದಲಾಗಿ ಇದು ಜಿಹಾದಿಗಳ ಕೃತ್ಯವಾಗಿದೆ. ಮಾತ್ರವಲ್ಲದೇ ಈ ಕೃತ್ಯದ ಹಿಂದೆ ಇರುವುದು ಈ ದೇಶದ ಕಾನೂನನ್ನು ಧಿಕ್ಕರಿಸುವ ಮಾನಸಿಕತೆ ಅಡಗಿದೆ ಎಂದು ಆರೋಪಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಸಮರ್ಥಿಸುವ ಮನಃಸ್ಥಿತಿ, ಸಹೋದ್ಯೋಗಿಗೆ ಮನೆಗೆ ಡ್ರಾಪ್ ಕೊಟ್ಟ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ನೈತಿಕ ಪೊಲೀಸ್ ಗಿರಿಯ ಮನಃಸ್ಥಿತಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡುವ ವಿಧ್ವಂಸಕ ಮನಃಸ್ಥಿತಿ, ರಾಮನವಮಿಯ ದಿನ ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ಮಾಡುವ ಮನಃಸ್ಥಿತಿ, ಈಗ ಹುಬ್ಬಳ್ಳಿಯಲ್ಲಿ ಹಾಡಹಗಲೆ ಹಿಂದು ಯುವತಿಯನ್ನು ಬರ್ಭರವಾಗಿ ಹತ್ಯೆ ಮಾಡುವ ಮನಃಸ್ಥಿತಿ ಎಲ್ಲವೂ ಒಂದೆ. ಸಿದ್ದರಾಮಯ್ಯನವರೇ ಇದೇನಾ ನೀವು ಕಂಡ ಕನಸಿನ ಸರ್ವ ಜನಾಂಗದ ಶಾಂತಿಯ ತೋಟ. ಮಾತೆತ್ತಿದರೆ ಜಾತ್ಯತೀತತೆಯ ಮಾತುಗಳನ್ನ ಆಡುವ ನೀವು ರಾಜ್ಯದಲ್ಲಿ ಅಮಾಯಕ Expert ವಿಚಾರದಲ್ಲಿ ಯಾಕೆ ಸುಮ್ಮನಿದ್ದೀರಿ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮಾತಾಡಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು ವೇದಿಕೆಯಲ್ಲಿ ಕಾರ್ಕಳಮಂಡಲ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಸಾಲಿಯಾನ್ ಬೋಳ ಮಹಾವೀರ ಹೆಗ್ಡೆ, ಮಣಿರಾಜ್ ಶೆಟ್ಟಿ ಸುಮಿತ್ ಶೆಟ್ಟಿ ಅರುಣ್ ಶೆಟ್ಟಿ ಪಾದೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಉದಯ ಎಸ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಹರ್ಷವರ್ಧನ್ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement