For the best experience, open
https://m.newskannada.com
on your mobile browser.
Advertisement

ಕಡಲೆ ಕಾಯಿಯ ಅಲರ್ಜಿಯಿಂದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ ಸಾವು

ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ವೃತ್ತಿಪರ ನೃತ್ಯಗಾರ್ತಿ ಓರ್ಲಾ ಬ್ಯಾಕ್ಸೆಂಡೇಲ್(25) ಅವರು ಕಡಲೆ ಕಾಯಿಯ ಅಲರ್ಜಿಯಿಂದ ಸಾವನ್ನಪ್ಪಿದ್ದಾರೆ. ತೀವ್ರವಾದ ಅಲರ್ಜಿದಿಂದ ಕೋಮಾಗೆ ಹೋಗಿದ್ದ ಓರ್ಲಾ ಜನವರಿ 11 ರಂದು ಇಹಲೋಕ ತ್ಯಜಿಸಿದ್ದಾರೆ.
05:38 PM Jan 26, 2024 IST | Ashika S
ಕಡಲೆ ಕಾಯಿಯ ಅಲರ್ಜಿಯಿಂದ ನ್ಯೂಯಾರ್ಕ್‌ನ ಜನಪ್ರಿಯ ನೃತ್ಯಗಾರ್ತಿ ಸಾವು

ನ್ಯೂಯಾರ್ಕ್‌: ನ್ಯೂಯಾರ್ಕ್‌ನ ಅತ್ಯಂತ ಜನಪ್ರಿಯ ವೃತ್ತಿಪರ ನೃತ್ಯಗಾರ್ತಿ ಓರ್ಲಾ ಬ್ಯಾಕ್ಸೆಂಡೇಲ್(25) ಅವರು ಕಡಲೆ ಕಾಯಿಯ ಅಲರ್ಜಿಯಿಂದ ಸಾವನ್ನಪ್ಪಿದ್ದಾರೆ. ತೀವ್ರವಾದ ಅಲರ್ಜಿದಿಂದ ಕೋಮಾಗೆ ಹೋಗಿದ್ದ ಓರ್ಲಾ ಜನವರಿ 11 ರಂದು ಇಹಲೋಕ ತ್ಯಜಿಸಿದ್ದಾರೆ.

Advertisement

ಈ ನೃತ್ಯಗಾರ್ತಿಯ ಪ್ರಾಣಕ್ಕೆ ಕಂಟಕವಾಯಿತು ಒಂದು ಕುಕ್ಕೀಸ್. ​​​​ತಪ್ಪಾಗಿ ಲೇಬಲ್ ಮಾಡಲಾದ ಕುಕೀಸ್ ಸೇವಿಸಿ ತೀವ್ರವಾದ ಅಲರ್ಜಿಗೆ ಒಳಗಾಗಿದ್ದ ನೃತ್ಯಗಾರ್ತಿ ಹಲವು ದಿನಗಳ ಜೀವನ್ಮರಣ ಹೋರಾಟದ ನಂತರ ಸಾವನ್ನಪ್ಪಿದ್ದಾರೆ.

ಜಗತ್ತಿನಲ್ಲಿ ನಾನಾ ರೀತಿಯ ಅಲರ್ಜಿ ಇದೆ. ಕೆಲವರಿಗೆ ಧೂಳು ಅಲರ್ಜಿಯನ್ನು ಉಂಟು ಮಾಡಿದರೆ, ಇನ್ನು ಕೆಲವರಿಗೆ ಆಹಾರ ಅಲರ್ಜಿಯನ್ನುಂಟು ಮಾಡುತ್ತದೆ.

Advertisement

ಇದೆ ರೀತಿ ಕಡಲೆ ಕಾಯಿಯ ಅಲರ್ಜಿಯನ್ನು ಹೊಂದಿದ್ದ ಓರ್ಲಾ ಬ್ಯಾಕ್ಸೆಂಡೇಲ್ ಕುಕ್ಕೀಸ್​​​ ಬಾಕ್ಸ್​​​ನಲ್ಲಿ ಕಡಲೆಕಾಯಿ ಸೇರಿಸಿರುವುದರ ಬಗ್ಗೆ ನಮೂದಿಸಿರದ ಕಾರಣ ಅದನ್ನು ಆಕೆ ಸೇವಿಸಿದ್ದಾಳೆ. ಇದು ಆಕೆಯ ಪ್ರಾಣಕ್ಕೆ ಕಂಟಕವಾಗಿದೆ.

ವೆನಿಲ್ಲಾ ಫ್ಲೋರೆಂಟೈನ್ ಕುಕೀಸ್​​​​ಗಳಲ್ಲಿ ಕಡಲೆಕಾಯಿ ಇದೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಅವುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಕಾರಣ ಸಾವಿಗೆ ಕಾರಣವಾಗಿದೆ ಎಂದು ಆಕೆಯ ವಕೀಲರು ಹೇಳಿದ್ದಾರೆ.

Advertisement
Tags :
Advertisement