For the best experience, open
https://m.newskannada.com
on your mobile browser.
Advertisement

ಶಸ್ತ್ರಚಿಕಿತ್ಸೆ ವೇಳೆ​ ಕಾರ್ಡಿಯಾಕ್ ಅರೆಸ್ಟ್‌: ಜನಪ್ರಿಯ ಮಾಡೆಲ್ ಸಾವು

ಜನಪ್ರಿಯ ಬ್ರೆಜಿಲ್​​​ನ ಫೇಮಸ್ ಮಾಡೆಲ್ ಲುವಾನಾ ಆಂಡ್ರೇಡ್ ಸಾವನ್ನಪ್ಪಿದ್ದಾರೆ. ಲುವಾನಾ ಆಂಡ್ರೇಡ್ ಅವರು ತಮ್ಮ 29ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
11:20 AM Nov 09, 2023 IST | Ramya Bolantoor
ಶಸ್ತ್ರಚಿಕಿತ್ಸೆ ವೇಳೆ​ ಕಾರ್ಡಿಯಾಕ್ ಅರೆಸ್ಟ್‌  ಜನಪ್ರಿಯ ಮಾಡೆಲ್ ಸಾವು

ಬ್ರೆಜಿಲಿಯನ್: ಜನಪ್ರಿಯ ಬ್ರೆಜಿಲ್​​​ನ ಫೇಮಸ್ ಮಾಡೆಲ್ ಲುವಾನಾ ಆಂಡ್ರೇಡ್ ಸಾವನ್ನಪ್ಪಿದ್ದಾರೆ. ಲುವಾನಾ ಆಂಡ್ರೇಡ್ ಅವರು ತಮ್ಮ 29ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ದೇಹದ ಅಂದವನ್ನು ಹೆಚ್ಚಿಸುವ ಸಲುವಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆಂದು ಸಾವೊ ಪಾಲೊ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಆದರೆ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಸಮಯದಲ್ಲಿ ಲುವಾನಾಗೆ ನಾಲ್ಕು ಬಾರಿ ಕಾರ್ಡಿಯಾಕ್ ಅರೆಸ್ಟ್‌ ಆಗಿದೆ. ತಕ್ಷಣ ಅವರನ್ನ ಐಸಿಯುಗೆ ಶಿಫ್ಟ್‌ ಮಾಡಿದ ವೈದ್ಯರು ಬದುಕಿಸಲು ಪ್ರಯತ್ನಿಸಿದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಾಡೆಲ್‌ ಲುವಾನಾ ಮೃತಪಟ್ಟಿದ್ದಾರೆ. ಇನ್ನೂ ಈ ಬಗ್ಗೆ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಲುವಾನಾ ಆಂಡ್ರೇಡ್ ಗೆಳೆಯ ಜೋವೊ ಹದಾದ್ ಅವರು "ನಿನ್ನನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ ಎಂದು" ಭಾವುಕರಾಗಿ ಬರೆದುಕೊಂಡಿದ್ದಾರೆ. ಇನ್ನೂ, ಬ್ರೆಜಿಲಿಯನ್ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಕೂಡ ಗೌರವ ಸಲ್ಲಿಸಿದರು.

Advertisement
Advertisement
Tags :
Advertisement