For the best experience, open
https://m.newskannada.com
on your mobile browser.
Advertisement

ಪೋರಬಂದರ್​​ನಲ್ಲಿ ಡ್ರಗ್ಸ್​ ದಂಧೆ: 6 ಪಾಕಿಸ್ತಾನಿಯರ ಬಂಧನ

ಗುಜರಾತ್​ನ ಪೋರಬಂದರ್​​ನಲ್ಲಿ  6 ಪಾಕಿಸ್ತಾನಿಯರು ಭಾರತದ ದೋಣಿಯನ್ನು ಬಳಸಿಕೊಂಡು ನಿಷೇಧಿತ ಡ್ರಗ್ಸ್​ ಸಾಗಾಟ ಮಾಡುತ್ತಿದ್ದು, ಅವರನ್ನು ಬಂಧಿಸಿ ಅವರಿಂದ ಬರೋಬ್ಬರಿ 400 ಕೋಟಿ ಮೌಲ್ಯದ ಡ್ರಗ್ಸ್​ ಸೀಜ್ ಮಾಡಲಾಗಿದೆ.
03:25 PM Mar 13, 2024 IST | Ashika S
ಪೋರಬಂದರ್​​ನಲ್ಲಿ ಡ್ರಗ್ಸ್​ ದಂಧೆ  6 ಪಾಕಿಸ್ತಾನಿಯರ ಬಂಧನ

ಗುಜರಾತ್​: ಗುಜರಾತ್​ನ ಪೋರಬಂದರ್​​ನಲ್ಲಿ  6 ಪಾಕಿಸ್ತಾನಿಯರು ಭಾರತದ ದೋಣಿಯನ್ನು ಬಳಸಿಕೊಂಡು ನಿಷೇಧಿತ ಡ್ರಗ್ಸ್​ ಸಾಗಾಟ ಮಾಡುತ್ತಿದ್ದು, ಅವರನ್ನು ಬಂಧಿಸಿ ಅವರಿಂದ ಬರೋಬ್ಬರಿ 400 ಕೋಟಿ ಮೌಲ್ಯದ ಡ್ರಗ್ಸ್​ ಸೀಜ್ ಮಾಡಲಾಗಿದೆ.

Advertisement

ಖಚಿತ ಮಾಹಿತಿ ಆಧಾರದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ, ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಆಂಟಿ ಟೆರರಿಸಮ್ ಸ್ಕ್ವಾಡ್​ಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನಿಯರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು  ಇದನ್ನು ದೆಹಲಿ ಮತ್ತು ಪಂಜಾಬ್​​ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಗುಜರಾತ್​ ಎಟಿಎಸ್ ತಿಳಿಸಿದೆ.

Advertisement

ಗುಜರಾತ್ ಮುಖ್ಯಮಂತ್ರಿ ಭುಪೇಂದ್ರ ಪಟೇಲ್ ತನಿಖಾ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

Advertisement
Tags :
Advertisement