For the best experience, open
https://m.newskannada.com
on your mobile browser.
Advertisement

ಅಶ್ಲೀಲ ವಿಡಿಯೋ ಪ್ರಕರಣ: ಹೆಚ್​ಡಿ ರೇವಣ್ಣ ಬಂಧನ

ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣರನ್ನು ವಿಶೇಷ ತನಿಖಾ ದಳದ  ಅಧಿಕಾರಿಗಳು ಬಂಧಿಸಿದ್ದಾರೆ.
07:22 PM May 04, 2024 IST | Ashika S
ಅಶ್ಲೀಲ ವಿಡಿಯೋ ಪ್ರಕರಣ  ಹೆಚ್​ಡಿ ರೇವಣ್ಣ ಬಂಧನ

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣರನ್ನು ವಿಶೇಷ ತನಿಖಾ ದಳದ  ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ರೇವಣ್ಣರ ಬಂಧನಕ್ಕೆ ಎಸ್ಐಟಿ ಅಧಿಕಾರಿಗಳು ತಲಾಶ್ ನಡೆಸಿದರು. ಇದೇ ವೇಳೆ ಅವರು, ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿರುವುದು ತಿಳಿದು ಎರಡು ಕಾರುಗಳಲ್ಲಿ ಅಲ್ಲಿಗೆ ದೌಡಾಯಿಸಿದರು.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ  ಹೆಚ್​ಡಿ ದೇವೇಗೌಡರ ಮನೆಗೆ 10 ಜನ ಅಧಿಕಾರಿಗಳು ಭೇಟಿ ನೀಡಿ ರೇವಣ್ಣರನ್ನು ವಶಕ್ಕೆ ಪಡೆದು, ಅಧಿಕಾರಿಗಳು ನೇರವಾಗಿ ಎಸ್​ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

Advertisement

ಅಧಿಕಾರಿಗಳು ಬಂದು 15 ನಿಮಿಷವಾದ್ರೂ ಮನೆ ಬಾಗಿಲು ಓಪನ್ ಮಾಡಲಾಗಿರಲಿಲ್ಲ. ನಂತರ ರೇವಣ್ಣರೇ ಬಾಗಿಲು ತೆರೆದು ಹೊರಬಂದರು. ತಕ್ಷಣವೇ ಅವರನ್ನು ವಶಕ್ಕೆ ಪಡೆಧಿದ್ದಾರೆ.

ಮೈಸೂರಿನ ಕೆಆರ್​ ನಗರ ಠಾಣೆಯಲ್ಲಿ ದಾಖಲಾದ ಅಪಹರಣ, ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣರನ್ನು ಎಸ್ಐಟಿ ವಶಕ್ಕೆ ಪಡೆದಿದೆ.

Advertisement
Tags :
Advertisement