For the best experience, open
https://m.newskannada.com
on your mobile browser.
Advertisement

ಬಡ ರಾಜ್ಯಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

ಪ್ರಪಂಚದಲ್ಲಿ ಭಾರತ ಬೆಳೆಯುತ್ತಿರುವ ದೇಶ ಅಥವಾ ಡೆವಲಪಿಂಗ್ ಕಂಟ್ರಿ ಎಂದು ಗುರುತಿಸಿಕೊಂಡಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಾರತ ಮುಂದಿದೆ. ಆದರೂ ಇಲ್ಲೂ ಹಲವು ಸಮಸ್ಯೆಗಳಿವೆ. ಹಲವು ರಾಜ್ಯಗಳು ಸರಿಯಾದ ಮೂಲಭೂತ ಸೌಕರ್ಯಗಳೂ ಇಲ್ಲದೆ ನರಳುತ್ತಿವೆ.
05:12 PM Dec 21, 2023 IST | Ashitha S
ಬಡ ರಾಜ್ಯಗಳ ಪಟ್ಟಿ ಬಿಡುಗಡೆ  ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ಬೆಂಗಳೂರು: ಪ್ರಪಂಚದಲ್ಲಿ ಭಾರತ ಬೆಳೆಯುತ್ತಿರುವ ದೇಶ ಅಥವಾ ಡೆವಲಪಿಂಗ್ ಕಂಟ್ರಿ ಎಂದು ಗುರುತಿಸಿಕೊಂಡಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಾರತ ಮುಂದಿದೆ. ಆದರೂ ಇಲ್ಲೂ ಹಲವು ಸಮಸ್ಯೆಗಳಿವೆ. ಹಲವು ರಾಜ್ಯಗಳು ಸರಿಯಾದ ಮೂಲಭೂತ ಸೌಕರ್ಯಗಳೂ ಇಲ್ಲದೆ ನರಳುತ್ತಿವೆ.

Advertisement

ಒಂದು ಹೊತ್ತಿನ ಅನ್ನ, ಕುಡಿಯುವ ನೀರು, ಮನೆ ಮೊದಲಾದ ಮೂಲಭೂತ ವ್ಯವಸ್ಥೆಗಳು ಇಲ್ಲದೇನೆ ಸಂಕಷ್ಟ ಅನುಭವಿಸುತ್ತಿರುವ ಅದೆಷ್ಟೋ ಮಂದಿ ದೇಶದಲ್ಲಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಇದರಲ್ಲಿ ಭಾರತದ ಯಾವ ರಾಜ್ಯಗಳು ಎಷ್ಟು ಬಡತನದಲ್ಲಿವೆ ಎಂಬುದನ್ನು ತಿಳಿಸಲಾಗಿದೆ.

ಬಹು ಆಯಾಮದ ಬಡತನದ ಬಗ್ಗೆ ದೇಶದಲ್ಲಿ ನಡೆದಿರುವ ಅಧ್ಯಯನದ ಪ್ರಕಾರ, ದಕ್ಷಿಣ ಭಾರತದಲ್ಲಿ ಬಡತನದ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಆದ್ರೆ ಉತ್ತರ ಭಾರತದಲ್ಲಿ ಬಡತನದ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ.

Advertisement

ಭಾರತದಲ್ಲಿ ಅತಿ ಕಡಿಮೆ ಬಡತನ ಇರುವ ರಾಜ್ಯ ಕೇರಳ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಿಹಾರದಲ್ಲಿ ಅತಿಹೆಚ್ಚು ಬಡತನವಿದೆ. ಕೇರಳ, ಗೋವಾ, ಪುದುಚೇರಿ ರಾಜ್ಯಗಳಲ್ಲಿ ಶೇ.1ಕ್ಕಿಂತ ಕಡಿಮೆ ಬಡತನ ಇದೆ.

ದೇಶದ ಬಡತನದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 18ನೇ ಸ್ಥಾನದಲ್ಲಿದೆ., ಕರ್ನಾಟಕದಲ್ಲಿ ಶೇ. 7.58 ರಷ್ಟು ಬಡತನ ಇದೆ ಎಂದು ತಿಳಿದುಬಂದಿದೆ.

Advertisement
Tags :
Advertisement