ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿ.ಎ. ಪವರ್ 25- ಸಿ.ಎ ಇಂಟರ್- ಗ್ರೂಪ್1, ಸೀಸನ್ -4" ತರಬೇತಿ ಶಿಬಿರದ ಸಮಾರೋಪ ಸಮಾರಂಭ

ನಗರದಲ್ಲಿ ಫೆ.24 ರಂದು ' ಸಿ.ಎ. ಪವರ್ 25- ಸಿ.ಎ ಇಂಟರ್- ಗ್ರೂಪ್1, ಸೀಸನ್ -4' ತರಬೇತಿ ಶಿಬಿರದ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
06:27 PM Feb 25, 2024 IST | Ashitha S

ಮಂಗಳೂರು: ನಗರದಲ್ಲಿ ಫೆ.24 ರಂದು " ಸಿ.ಎ. ಪವರ್ 25- ಸಿ.ಎ ಇಂಟರ್- ಗ್ರೂಪ್1, ಸೀಸನ್ -4" ತರಬೇತಿ ಶಿಬಿರದ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

Advertisement

ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಧೃಢ ನಿರ್ಧಾರ ಹಾಗೂ ಸಮರ್ಪಣಾ ಭಾವನೆಯಿಂದ ಮಾತ್ರ ಸಾಧ್ಯ. ಶಿಬಿರದ ಸದುಪಯೋಗ ಪಡೆದು ಆತ್ಮವಿಶ್ವಾಸದಿಂದ ತಮ್ಮ ಗುರಿಸಾಧಿಸಬೇಕು ಎಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತ್ರಿಶಾ ಕ್ಲಾಸಸ್ ನ ಉಪನ್ಯಾಸಕ ಸಿ.ಎ. ನಾಗೇಂದ್ರ ಭಕ್ತಾ ಇವರು ಸಿ.ಎ. ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಮನೋ ಸಾಮರ್ಥ್ಯಗಳ ವಿವರ ನೀಡಿದರು.ಡಾ. ಬಿ. ದೇವದಾಸ್ ಪೈ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಬೇಕಾದ ಬಗ್ಗೆ ಉಪಯುಕ್ತ ಸಲಹೆ ನೀಡಿದರು.

Advertisement

ಹತ್ತು ದಿನಗಳ ಅವಧಿಯ ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ಹಾಗೂ ಅಣಕ ಪರೀಕ್ಷೆ ನೀಡಿ ಅಂತಿಮ ಮಟ್ಟಕ್ಕೆ ಸಿದ್ಧಗೊಳಿಸಿದೆ. ಈ ಕಾರಣದಿಂದಾಗಿ ಕಳೆದ ಮೂರು ಬ್ಯಾಚ್ ನಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣ ಗೊಂಡಿರುತ್ತಾರೆ.

ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.

ಶಿಬಿರಾರ್ಥಿಗಳು ಉತ್ಸಾಹದಿಂದ ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ಯಶಸ್ವಿ ಸ್ವಾಗತಿಸಿದರು, ದೀಪ್ನಾ ಜೆ ಕಾರ್ಯಕ್ರಮ ನಿರ್ವಹಿಸಿ, ವೈಷ್ಣವಿ ಧನ್ಯವಾದ ಸಮರ್ಪಣೆ ಮಾಡಿದರು.

Advertisement
Tags :
indiaLatestNewsNewsKannadaಮಂಗಳೂರುವಿಶ್ವ ಕೊಂಕಣಿ ಕೇಂದ್ರ
Advertisement
Next Article