For the best experience, open
https://m.newskannada.com
on your mobile browser.
Advertisement

ಬೆಂಗಳೂರಲ್ಲಿ ಪ್ರಭಾಸ್​-ಅಲ್ಲು ಫ್ಯಾನ್ಸ್ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್

ತಮ್ಮ ನೆಚ್ಚಿನ ನಟರ ಬರ್ತ್​ಡೇ, ಹೊಸ ಸಿನಿಮಾ ರಿಲೀಸ್ ಆದಾಗ ಅಥವಾ ಅವರನ್ನು ಭೇಟಿ ಮಾಡಿದಾಗ ಫ್ಯಾನ್ಸ್​ ಹೆಚ್ಚು ಖುಷಿ ಪಡುತ್ತಾರೆ. ಆದರೆ ಟಾಲಿವುಡ್​ನ ಪ್ರಭಾಸ್​ ಮತ್ತು ಅಲ್ಲು ಅರ್ಜುನ್​ ಅವರ ಡೈ ಹಾರ್ಡ್​ ಫ್ಯಾನ್ಸ್​ ಮಧ್ಯೆ ಗಲಾಟೆ ನಡೆದಿದ್ದು ಓರ್ವನಿಗೆ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ.
09:27 AM Mar 11, 2024 IST | Ashitha S
ಬೆಂಗಳೂರಲ್ಲಿ ಪ್ರಭಾಸ್​ ಅಲ್ಲು ಫ್ಯಾನ್ಸ್ ಮಧ್ಯೆ ಹೊಡೆದಾಟ  ವಿಡಿಯೋ ವೈರಲ್

ಬೆಂಗಳೂರು: ತಮ್ಮ ನೆಚ್ಚಿನ ನಟರ ಬರ್ತ್​ಡೇ, ಹೊಸ ಸಿನಿಮಾ ರಿಲೀಸ್ ಆದಾಗ ಅಥವಾ ಅವರನ್ನು ಭೇಟಿ ಮಾಡಿದಾಗ ಫ್ಯಾನ್ಸ್​ ಹೆಚ್ಚು ಖುಷಿ ಪಡುತ್ತಾರೆ. ಆದರೆ ಟಾಲಿವುಡ್​ನ ಪ್ರಭಾಸ್​ ಮತ್ತು ಅಲ್ಲು ಅರ್ಜುನ್​ ಅವರ ಡೈ ಹಾರ್ಡ್​ ಫ್ಯಾನ್ಸ್​ ಮಧ್ಯೆ ಗಲಾಟೆ ನಡೆದಿದ್ದು ಓರ್ವನಿಗೆ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಯಂಗ್ ರೆಬಲ್​ ಸ್ಟಾರ್​​ ಪ್ರಭಾಸ್​ ಹಾಗೂ ಐಕಾನ್ ಸ್ಟಾರ್​ ಅಲ್ಲು ಅರ್ಜುನ್​ ಅಭಿಮಾನಿಗಳ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಇದು ಅತಿರೇಕಕ್ಕೆ ತಿರುಗಿದ್ದು ಅಲ್ಲು ಅರ್ಜುನ್​ನ 10 ಅಭಿಮಾನಿಗಳು ಸೇರಿ ಪ್ರಭಾಸ್​​ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸದ್ಯ ಭೀರಕವಾಗಿ ಹಲ್ಲೆ ಮಾಡಿರುವ ವಿಡಿಯೋ ಎಕ್ಸ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಓರ್ವ ಯುವಕನ ಕೈಯಲ್ಲಿ ಬ್ಯಾಟ್​ ಇರುವುದರಿಂದ ಕ್ರಿಕೆಟ್​ ಆಡುವಾಗ ಈ ಅಭಿಮಾನಿಗಳ ಗಲಾಟೆ ಶುರುವಾಗಿದೆ ಎಂದು ಗೊತ್ತಾಗುತ್ತದೆ. ಇದನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಲಾಗಿದೆ.

Advertisement

Advertisement
Tags :
Advertisement