For the best experience, open
https://m.newskannada.com
on your mobile browser.
Advertisement

15 ವರ್ಷದಿಂದ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ: ಪ್ರದೀಪ್ ಈಶ್ವರ್

ಕಳೆದ 15 ವರ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ ಎಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದರು.
05:46 PM May 04, 2024 IST | Nisarga K
15 ವರ್ಷದಿಂದ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ  ಪ್ರದೀಪ್ ಈಶ್ವರ್
15 ವರ್ಷದಿಂದ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ: ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಕಳೆದ 15 ವರ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ ಎಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತಕ್ಕ ಸ್ಟ್ರಾಂಗ್ ವುಮೆನ್,ಶಿವಮೊಗ್ಗದ ಮಣ್ಣಿನ‌ಮಗಳು, ದೊಡ್ಡಮನೆ ಸೊಸೆಯಾಗಿದ್ದಾರೆ. ನಾನು ದೊಡ್ಡಮನೆ ಅಭಿಮಾನಿಯಾಗಿದ್ದೇನೆ. ಗೀತಕ್ಕ ಗೆದ್ದರೆ ಅಭಿವೃದ್ಧಿ ಪಥದೆಡೆ ಕರೆದೊಯ್ಯಲಿದ್ದಾರೆ ಎಂದರು.

ಸಚಿವ ಮಧು ಬಂಗಾರಪ್ಪ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಕಾರಿ ಬೆಳವಣಿಗೆ ನಡೆಸಿದ್ದಾರೆ. 20 ಸಾವಿರ ಡೀಮ್ಡ್ ಫಾರೆಸ್ಡ್ ನ 13 ಸಭೆ ನಡೆಸಿದ್ದಾರೆ. ಸಮಸದಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಎಂಪಿಗಳು ಈ ಬಗ್ಗೆ ಸಙಸತ್ ನಲ್ಲಿ ಮಾತನಾಡಬೇಕು. ರಾಘವೇಂದ್ರರವರು ಯಾವತ್ತಾದರೂ ಅರಣ್ಯ ನಿವಾಸಿಗಳ ಸಮಸ್ಯೆ ಬಗ್ಗೆ ಮಾತನಾಡಿರುವುದನ್ನ‌ ವಿವರ ಕೊಡಿ ಎಂದರು.

Advertisement

ಕಾಂಗ್ರೆಸ್, ಪಂಚಾಯಿತಿ, ಸ್ವಾಭಿಮಾನ ಕಲ್ಪಿಸಿದ್ದು ಬಿಜೆಪಿ ಯಾಗಿದೆ. ಬಿಜೆಪಿ ಬಂದ ಮೇಲೆ ಶೌಚಾಲಯ ನಿರ್ಮಾಣವಾಗಿದೆ ಎಂದಿದ್ದಾರೆ. ಅಲ್ಲಿಯವರೆಗೆ ಶೌಚಾಲಯಕ್ಕೆ ಹೋಗಿರಲಿಲ್ಲಚಾ ಎಂದು ಪ್ರಶ್ನಿಸಿದರು.

ಶರಾವತಿ ಸಂತ್ರಸ್ತರಿಗೆ ಕಾಗೋಡು ತಿಮ್ಮಪ್ಪ ಹಕ್ಕುಪತ್ರ ಕೊಟ್ಟಿದ್ದರು. ಸಂಸದರು ಏನು ಮಾಡಿದರು. ಬರದ ಬಗ್ಗೆ ಮಾತನಾಡಲಿಲ್ಲ‌ ನಮ್ಮ ಸರ್ಕಾರ ಯಾಕೆ ಸುಪ್ರೀಂ ಕೋರ್ಡ್ ನಲ್ಲಿ ಹೋರಾಡಲಾಯಿತು ಎಂದು ಪ್ರಶ್ನಿಸಿದರು. ಬಡವರಿಗೆ ಕೊಡುವ ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡ್ತಾರೆ.

25 ಸಂಸದರಿಗೆ ಮತ ಕೇಳಲು ಫೇಸ್ ವ್ಯಾಲ್ಯೂಬಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಯವರ ಬಗ್ಗೆ ಮಾಯಮತನಾಡಿದ ಬಿಜೆಪಿಯ ಘಟಾನುಘಟಿಗಳು ಮೂಲೆಗುಂಪಾಗಿದ್ದಾರೆ. ಕ್ರಾಂತಿಕಾರಿ ಅಭಿವೃದ್ಧಿ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತರವರು ಗೆಲ್ಳಲಿದ್ದಾರೆ. ಐಡಿಯಾಲಿಜಿಕಲ್ ಚರ್ಚೆಗೆ ಬನ್ನಿ ವಾದ ವಿವಾದಕ್ಕೆ ಬರಬೇಡಿ ನಿಮ್ಮ ಬಾಯಿ ಮುಚ್ಚಿಸಲಾಗುವುದು ಎಂದರು.

ಒಬಿಸಿ ನಾಯಜನಾಗಿ ಸಚಿವ ಮಧು ಬಂಗಾರಪ್ಪ ಹೊರಹೊಮ್ಮಿದ್ದಾರೆ ಸಿದ್ದರಾಮಯ್ಯನವರ ನಙತರ ಮಧು ಬಂಗಾರಪ್ಪನವರು ಸಿದ್ದರಾಮಯ್ಯನವರ ಎರಡನೇ ಸಾಲಿನಲ್ಲಿ ನಿಲ್ಲಲಿದ್ದಾರೆ ಎಂದರು.

ಅಣ್ಣಮಲೈ ಅವರಿಗೆ ನಿವೃತ್ತಿ ಹಣ ಇಲ್ಲಿಂದಲೇ ಹೋಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಕೊಡುಗೆ ಏನು ಮತ್ತು ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಎಂಬುದನ್ನ ಮೇ.7 ರ ಒಳಗೆ ಬನ್ನಿ. ಐಡಿಯಾಲಜಿಕಲ್ ಚರ್ಚೆಗೆ ಬನ್ನಿ ಟೀಕೆ ಟಿಪ್ಪಣಿಗೆ ಬನ್ನಿ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಫೈಟ್ ನಡೆಯುತ್ತಿದೆ. ರಾಘವೇಂದ್ರ ಕಡೆದು ಕಟ್ಟೆಹಾಕಿರುವುದು ಏನು ಎಙದು ಹೇಳಲಿ ಎಂದು ಪ್ರಶ್ನಿಸಿದರು.

ಬಿಜೆಪಿಯ ಇಂಟರ್ನಲ್ ಸರ್ವೆ ಸಹ 6 ಸ್ಥಾನ ಗೆಲ್ಲಲಿದೆ ಎಂಬ ಮಾಹಿತಿ ಇದೆ ಕಾಂಗ್ರೆಸ್ ರಾಜ್ಯದಲ್ಲಿ 23 ಸ್ಥಾನ‌ ಗೆಲ್ಲಲಿದೆ. ಅಬ್ ಕೀ ಬಾರ್ 400 ಪಾರ್ ಎಂಬುದಕ್ಕೆ ಉತ್ತರಿಸಿದ ಪ್ರದೀಪ್ ಈಶ್ವರ್ 200 ಸ್ಥಾನ ದಾಟಲಿ ನೋಡೋಣ ಎಂದರು

Advertisement
Tags :
Advertisement