ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಶ್ಲೀಲ ವಿಡಿಯೋ​; ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ಆಗಮನ ಸಾಧ್ಯತೆ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್​ಡಿ ರೇವಣ್ಣ ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ ಜೋರಾಗಿದೆ. ದೇಶದಿಂದ ದೇಶಕ್ಕೆ ಹಾರುತ್ತಿರುವ ಪ್ರಜ್ವಲ್​ ರೇವಣ್ಣ ಹೆಡೆಮುರಿ ಕಟ್ಟಲು ಎಸ್​ಐಟಿ ಬಲೆ ಸಿದ್ಧವಾಗಿದೆ.
09:34 AM May 05, 2024 IST | Ashitha S

ಮಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್​ಡಿ ರೇವಣ್ಣ ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ ಜೋರಾಗಿದೆ. ದೇಶದಿಂದ ದೇಶಕ್ಕೆ ಹಾರುತ್ತಿರುವ ಪ್ರಜ್ವಲ್​ ರೇವಣ್ಣ ಹೆಡೆಮುರಿ ಕಟ್ಟಲು ಎಸ್​ಐಟಿ ಬಲೆ ಸಿದ್ಧವಾಗಿದೆ.

Advertisement

ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಜ್ವಲ್ ಬಂಧನಕ್ಕೆ ಸದ್ಯ ಲುಕ್​ಔಟ್​ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಏರ್​ಪೋರ್ಟ್​ ಇಮಿಗ್ರೇಶನ್ ಬಳಿಯೇ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಂಗಳೂರು, ಕೊಚ್ಚಿ, ಗೋವಾ, ಬೆಂಗಳೂರಿನ ಯಾವುದೇ ಏರ್​ಪೋರ್ಟ್​ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ. ಬಳಿಕ ಸ್ಥಳೀಯ ಠಾಣೆಗೆ ಕರೆದೊಯ್ಯುವ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಂತರ ಪ್ರಜ್ವಲ್​ರನ್ನು SIT ಅಧಿಕಾರಿಗಳು ಬೆಂಗಳೂರಿಗೆ ಕರೆತರಲಿದ್ದಾರೆ.

Advertisement

ಸದ್ಯ ಇಂದು ಮಂಗಳೂರು ಏರ್​ಪೋರ್ಟ್​ಗೆ ಒಟ್ಟು 4 ವಿಮಾನ ಆಗಮಿಸಿವೆ. ಅಬುದಾಬಿಯಿಂದ ಈಗಷ್ಟೇ ಒಂದು ವಿಮಾನ ಲ್ಯಾಂಡ್ ಆಗಿದೆ. ಬೆಳಗ್ಗೆ 7.55ಕ್ಕೆ ದುಬೈನಿಂದ ಎರಡನೇ ವಿಮಾನ, ಸಂಜೆ 4.35ಕ್ಕೆ ದುಬೈನಿಂದ ಮಂಗಳೂರಿಗೆ 3ನೇ ವಿಮಾನ ಮತ್ತು ಸಂಜೆ 6.15ಕ್ಕೆ ಮಂಗಳೂರಿಗೆ ನಾಲ್ಕನೇ ವಿಮಾನ ಆಗಮಿಸಲಿವೆ.

 

 

Advertisement
Tags :
HD RevannaindiaLatestNewsPRAJWAL REVANNAನವದೆಹಲಿಬೆಂಗಳೂರು
Advertisement
Next Article