For the best experience, open
https://m.newskannada.com
on your mobile browser.
Advertisement

ಕೂಚ್ ಬೆಹಾರ್ ಟ್ರೋಫಿ: ಏಕಾಂಗಿಯಾಗಿ 400 ಕ್ಕೂ ಹೆಚ್ಚು ರನ್ ಗಳಿಸಿದ ಪ್ರಖರ್ ಚತುರ್ವೇದಿ 

ಕೆಎಸ್​ಸಿಎ ಮೈದಾನದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ ನಡುವಿನ ಕೂಚ್ ಬೆಹಾರ್ ಟ್ರೋಫಿಯ  ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ  ಏಕಾಂಗಿಯಾಗಿ 400 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
04:59 PM Jan 15, 2024 IST | Ashika S
ಕೂಚ್ ಬೆಹಾರ್ ಟ್ರೋಫಿ  ಏಕಾಂಗಿಯಾಗಿ 400 ಕ್ಕೂ ಹೆಚ್ಚು ರನ್ ಗಳಿಸಿದ ಪ್ರಖರ್ ಚತುರ್ವೇದಿ 

ಬೆಂಗಳೂರು: ಕೆಎಸ್​ಸಿಎ ಮೈದಾನದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ ನಡುವಿನ ಕೂಚ್ ಬೆಹಾರ್ ಟ್ರೋಫಿಯ  ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ  ಏಕಾಂಗಿಯಾಗಿ 400 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

Advertisement

ಈ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಇಲ್ಲಿಯವರೆಗೆ ಆಡಿದ ಫೈನಲ್‌ ಪಂದ್ಯದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಪಂದ್ಯದಲ್ಲಿ ಪ್ರಖರ್ ಚತುರ್ವೇದಿ 638 ಎಸೆತಗಳನ್ನು ಅಂದರೆ ಬರೋಬ್ಬರಿ 106 ಓವರ್​ಗಳನ್ನುಎದುರಿಸಿ 46 ಬೌಂಡರಿ ಹಾಗೂ 3 ಸಿಕ್ಸರ್‌ಗ ಒಳಗೊಂಡಂತೆ 404 ರನ್ ಗಳಿಸಿದರು.

Advertisement

ಟಾಸ್ ಗೆದ್ದು ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು.  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 380 ರನ್ ಕಲೆಹಾಕಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಪ್ರಖರ್ ಚತುರ್ವೇದಿ ಅವರ 404 ರನ್ ಹಾಗೂ ಹರ್ಷಿಲ್ ಧರ್ಮನಿ ಅವರ 169 ರನ್​ಗಳ ಆಧಾರದ ಮೇಲೆ 8 ವಿಕೆಟ್ ನಷ್ಟಕ್ಕೆ 890 ರನ್ ಕಲೆಹಾಕಿತು. ಅಂತಿಮವಾಗಿ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಬ್ಯಾಟಿಂಗ್ ಆಧಾರದ ಮೇಲೆ ಮುಂಬೈ ತಂಡ 380 ರನ್​ಗಳಿಗೆ ಆಲೌಟ್ ಆಗಿ ಮೊದಲ ಇನ್ನಿಂಗ್ಸ್ ಮುಗಿಸಿತು. 380 ರನ್​ಗಳಿಗೆ ಮುಂಬೈ ತಂಡವನ್ನು ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಖರ್ ಕೊನೆಯವರೆಗೂ ಅಜೇಯರಾಗಿ ಉಳಿದು ಬರೋಬ್ಬರಿ 404 ರನ್ ಕಲೆಹಾಕಿದರು.

ಮೊದಲ ವಿಕೆಟ್ ಪತನದ ಬಳಿಕ ಜೊತೆಯಾದ ಪ್ರಖರ್ ಹಾಗೂ ಹರ್ಷಿಲ್ ಧರ್ಮನಿ ತಲಾ ಶತಕ ಸಿಡಿಸುವ ಮೂಲಕ ತಂಡವನ್ನು 399 ರನ್​ಗಳಿಗೆ ಕೊಂಡೊಯ್ದರು. ಈ ವೇಳೆ 169 ರನ್ ಕಲೆಹಾಕಿದ್ದ ಹರ್ಷಿಲ್ ವಿಕೆಟ್ ಪತನವಾಯಿತು.

ಹರ್ಷಿಲ್ ನಂತರ ಬಂದ ಕಾರ್ತಿಕೇಯ ಕೂಡ ಪ್ರಖರ್ ಜೊತೆ ಅದ್ಭುತ ಜೊತೆಯಾಟ ನಡೆಸಿದರು. ಹಾಗೆಯೇ ವೈಯಕ್ತಿಕವಾಗಿ 72 ರನ್​ಗಳ ಕೊಡುಗೆ ಸಹ ನೀಡಿದರು. ಇನ್ನು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ರಾಜ್ 51 ರನ್ ಹಾಗೂ 10ನೇ ಕ್ರಮಾಂಕದಲ್ಲಿ ಆಡಿದ ಸಮರ್ಥ್​ ಅಜೇಯ 55 ರನ್ ಕಲೆಹಾಕುವ ಮೂಲಕ ಪ್ರಖರ್​ಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ದಾಖಲೆಯ 890 ರನ್ ಕಲೆಹಾಕಿತು.

Advertisement
Tags :
Advertisement