ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಾತು ಬಿಟ್ಟಿದ್ದಕ್ಕೆ ಬರ್ಬರ ಹತ್ಯೆ ಮಾಡಿದ್ದ ಆರೋಪಿ ಪ್ರವೀಣ್‌: ಎಸ್ಪಿ ಅರುಣ್

ಮೃತ ಐನಾಝ್ ಮತ್ತು ಆರೋಪಿ ಪ್ರವೀಣ್ ಗೆ ಎಂಟು ತಿಂಗಳಿಂದ ಪರಿಚಯವಿತ್ತು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಗಾಢವಾದ ಸ್ನೇಹ ಬೆಳೆದಿತ್ತು. ಆದರೆ, ಒಂದು ತಿಂಗಳಿನಿಂದ ಐನಾಝ್ ಆರೋಪಿ ಪ್ರವೀಣ್ ನನ್ನು ದ್ವೇಷಿಸಲು ಆರಂಭಿಸಿದ್ದಳು. ಇದರಿಂದ ತುಂಬಾ ವಿಚಲಿತನಾಗಿದ್ದನು. ಅಲ್ಲದೆ, ಐನಾಝ್ ತನ್ನ ನಿಯಂತ್ರಣದಲ್ಲಿರಬೇಕೆಂಬ ಆರೋಪಿಯ ಮನೋಭಾವನೆಯೇ ನಾಲ್ವರ ಹತ್ಯೆಗೆ ಕಾರಣವಾಗಿತ್ತು ಎಂದು ಎಸ್ಪಿ ಅರುಣ್ ಹೇಳಿದರು.
02:56 PM Nov 23, 2023 IST | Ashika S

ಉಡುಪಿ: ಮೃತ ಐನಾಝ್ ಮತ್ತು ಆರೋಪಿ ಪ್ರವೀಣ್ ಗೆ ಎಂಟು ತಿಂಗಳಿಂದ ಪರಿಚಯವಿತ್ತು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಗಾಢವಾದ ಸ್ನೇಹ ಬೆಳೆದಿತ್ತು. ಆದರೆ, ಒಂದು ತಿಂಗಳಿನಿಂದ ಐನಾಝ್ ಆರೋಪಿ ಪ್ರವೀಣ್ ನನ್ನು ದ್ವೇಷಿಸಲು ಆರಂಭಿಸಿದ್ದಳು. ಇದರಿಂದ ತುಂಬಾ ವಿಚಲಿತನಾಗಿದ್ದನು. ಅಲ್ಲದೆ, ಐನಾಝ್ ತನ್ನ ನಿಯಂತ್ರಣದಲ್ಲಿರಬೇಕೆಂಬ ಆರೋಪಿಯ ಮನೋಭಾವನೆಯೇ ನಾಲ್ವರ ಹತ್ಯೆಗೆ ಕಾರಣವಾಗಿತ್ತು ಎಂದು ಎಸ್ಪಿ ಅರುಣ್ ಹೇಳಿದರು.

Advertisement

ಉಡುಪಿ ಎಸ್ಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಪ್ರವೀಣ್, ಐನಾಝ್ ಗೆ ಹಲವಾರು ಬಾರಿ ಸಹಾಯ ಮಾಡಿದ್ದಾನೆ. ಕೊಲೆ ಮಾಡುವ ದಿನ ಆತ ಟೋಲ್ ಗೇಟ್ ಗಿಂತಲೂ ಮೊದಲೇ ಕಾರು ಇಟ್ಟು ಬಂದಿದ್ದನು. ಬಳಿಕ ಬೇರೆ ಬೇರೆ ವಾಹನದಲ್ಲಿ ಡ್ರಾಪ್ ಪಡೆದುಕೊಂಡು ನೇಜಾರಿನ ತೃಪ್ತಿನಗರಕ್ಕೆ ಬಂದಿದ್ದಾನೆ. ಆರಂಭದಲ್ಲಿ ಐನಾಝ್ ಗೆ ಚಾಕುವಿನಿಂದ ಹಲ್ಲೆ ಮಾಡುತ್ತಾನೆ. ಆ ನಂತರ ತಾಯಿ ಹಸೀನಾ, ಅಕ್ಕ ಅಫ್ನಾನ್ ಹಾಗೂ ಕೊನೆಯಲ್ಲಿ ತಮ್ಮ ಆಸೀಮ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೃತ್ಯ ನಡೆಸಿದ ಬಳಿಕ ಬೇರೆ ಬೇರೆ ವಾಹನದಲ್ಲಿ ದ.ಕ ಜಿಲ್ಲೆಗೆ ಪರಾರಿಯಾಗಿದ್ದಾನೆ ಎಂದರು.

ಆಪ್ ವೊಂದರ ಮೂಲಕ ಐನಾಝ್ ಮನೆಯನ್ನು ಪ್ರವೀಣ್ ಕಂಡು ಹುಡುಕಿದ್ದಾನೆ. ಆ್ಯಪ್ ಲೊಕೇಶನ್ ಆಧಾರದಲ್ಲಿ ಆರೋಪಿ ಮನೆಗೆ ಬಂದಿದ್ದಾನೆ. ಆರೋಪಿ ಕೃತ್ಯಕ್ಕೂ ಮೊದಲು ಮನೆಗೆ ಬಂದಿರಲಿಲ್ಲ. ಹೆಚ್ಚುವರಿ ತಾಂತ್ರಿಕ ಮಾಹಿತಿಗಳನ್ನು ನಾವು ಕೊಡುವುದಿಲ್ಲ. ಚಾರ್ಜ್ ಶೀಟ್ ನಲ್ಲಿ ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿಗಳನ್ನು ಒಪ್ಪಿಸುತ್ತೇವೆ ಎಂದು ತಿಳಿಸಿದರು.

Advertisement

ಕೃತ್ಯ ನಡೆಸುವ ಕೈಗೆ ಗಾಯವಾಗಿದೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದನು. ಪತ್ನಿಗೆ ಸಂಶಯ ಬರೆದ ಹಾಗೆ ಮನೆಯಲ್ಲಿ ಪ್ರವೀಣ್ ವರ್ತಿಸಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಹೆಂಡತಿಯ ಸಂಬಂಧಿಕರ ಮನೆ ಬೆಳಗಾವಿಯ ಕುಡುಚಿಗೆ ಹೋಗಿದ್ದಾನೆ. ಕುಡುಚಿಯಲ್ಲಿ ಆರೋಪಿಗೆ ಆಶ್ರಯನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ ಎಂದರು.

ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ‌. ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಶೀಘ್ರದಲ್ಲೇ ಸೂಕ್ತ ಬಹುಮಾನ ಘೋಷಿಸಲಾಗುತ್ತದೆ ಎಂದು ಹೇಳಿದರು.

Advertisement
Tags :
LatetsNewsNewsKannadaಎಸ್ಪಿ ಅರುಣ್ಐನಾಝ್ಕಂಪೆನಿಕೆಲಸಪ್ರವೀಣ್ಹತ್ಯೆ
Advertisement
Next Article