For the best experience, open
https://m.newskannada.com
on your mobile browser.
Advertisement

ಯುವತಿಯಿಂದ ಜೈ ಶ್ರೀರಾಮ್​ ಬ್ಯಾನರ್​ ಹಿಡಿದು ಸ್ಕೈಡೈವಿಂಗ್

ಜನವರಿ 22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ಯುವತಿಯೊಬ್ಬಳು ಬ್ಯಾಂಕಾಕ್ ನಲ್ಲಿ ಸ್ಕೈ ಡೈವಿಂಗ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
09:47 AM Jan 04, 2024 IST | Ashitha S
ಯುವತಿಯಿಂದ ಜೈ ಶ್ರೀರಾಮ್​ ಬ್ಯಾನರ್​ ಹಿಡಿದು ಸ್ಕೈಡೈವಿಂಗ್

ಬ್ಯಾಂಕಾಕ್: ಜನವರಿ 22 ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ಯುವತಿಯೊಬ್ಬಳು ಬ್ಯಾಂಕಾಕ್ ನಲ್ಲಿ ಸ್ಕೈ ಡೈವಿಂಗ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಪ್ರಯಾಗ್‌ರಾಜ್‌ನ ನಿವಾಸಿಯಾಗಿರುವ 22 ವರ್ಷದ ಅನಾಮಿಕಾ ಶರ್ಮಾ, ಬ್ಯಾಂಕಾಕ್‌ನಲ್ಲಿ 13,000 ಅಡಿ ಎತ್ತರದಿಂದ ಜೈ ಶ್ರೀ ರಾಮ್ ಧ್ವಜದೊಂದಿಗೆ ಸ್ಕೈಡೈವಿಂಗ್ ಮಾಡುವ ಮೂಲಕ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರ ಬಗ್ಗೆ ತನಗಿರುವ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು, ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 6,000 ಕ್ಕೂ ಹೆಚ್ಚು ಮಂದಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಸೇರಿದಂತೆ ರಾಜಕೀಯ ಪಕ್ಷಗಳ ದೊಡ್ಡ ನಾಯಕರಿಗೆ ಆಹ್ವಾನ ನೀಡಲಾಗಿದೆ.

Advertisement

Advertisement
Tags :
Advertisement