For the best experience, open
https://m.newskannada.com
on your mobile browser.
Advertisement

ಗರ್ಭಿಣಿ ಎಂದು ಸುಳ್ಳು ಹೇಳಿ 98 ಲಕ್ಷ ರೂ. ಬಾಚಿಕೊಂಡಿದ್ದ ಮಹಿಳೆಗೆ ಜೈಲು ಶಿಕ್ಷೆ

ಇಟಾಲಿಯ ಓರ್ವ ಮಹಿಳೆ ಗರ್ಭಿಣಿ ಎಂದು ಸುಳ್ಳು ಹೇಳಿ ಬರೊಬ್ಬರಿ 98 ಲಕ್ಷ ರೂ. ಬಾಚಿಕೊಂಡಿದ್ದಾಳೆ. ಈಕೆ ಸಂಬಳದ ಜೊತೆಗೆ 6ತಿಂಗಳು ರಜೆ ಸಿಗುವುದರಿಂದ ಮತ್ತು ಹಣಕ್ಕಾಗಿ ಗರ್ಭಿಣಿ ಎಂದು ಒಂದಲ್ಲ ಎರಡಲ್ಲ ಬರೋಬ್ಬರಿ 17 ಬಾರಿ ಸುಳ್ಳು ಹೇಳಿ 98 ಲಕ್ಷಕ್ಕೂ ಅಧಿಕ ರೂ. ಪಡೆದಿದ್ದಾರೆ.
05:11 PM Feb 18, 2024 IST | Gayathri SG
ಗರ್ಭಿಣಿ ಎಂದು ಸುಳ್ಳು ಹೇಳಿ 98 ಲಕ್ಷ ರೂ  ಬಾಚಿಕೊಂಡಿದ್ದ ಮಹಿಳೆಗೆ ಜೈಲು ಶಿಕ್ಷೆ

ಇಟಾಲಿಯ ಓರ್ವ ಮಹಿಳೆ ಗರ್ಭಿಣಿ ಎಂದು ಸುಳ್ಳು ಹೇಳಿ ಬರೊಬ್ಬರಿ 98 ಲಕ್ಷ ರೂ. ಬಾಚಿಕೊಂಡಿದ್ದಾಳೆ. ಈಕೆ ಸಂಬಳದ ಜೊತೆಗೆ 6ತಿಂಗಳು ರಜೆ ಸಿಗುವುದರಿಂದ ಮತ್ತು ಹಣಕ್ಕಾಗಿ ಗರ್ಭಿಣಿ ಎಂದು ಒಂದಲ್ಲ ಎರಡಲ್ಲ ಬರೋಬ್ಬರಿ 17 ಬಾರಿ ಸುಳ್ಳು ಹೇಳಿ 98 ಲಕ್ಷಕ್ಕೂ ಅಧಿಕ ರೂ. ಪಡೆದಿದ್ದಾರೆ.

Advertisement

ಇದೀಗಾ ಮಹಿಳೆಯ ಈ ಕೃತ್ಯ ಬಹಿರಂಗಗೊಂಡಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಇಟಾಲಿಯ ಬಾರ್ಬರಾ ಐಯೋಲೆ (50) ಕಳೆದ ಸುಮಾರು 24 ವರ್ಷಗಳಿಂದ ಗರ್ಭಧಾರಣೆಯ ನಾಟಕವಾಡುತ್ತಾ ಬಂದಿರುವ ಮಹಿಳೆ. 17 ಬಾರಿ ಗರ್ಭಿಧಾರಣೆ ಎಂದು ಕಂಪೆನಿಯಿಂದ ರಜೆ ಹಾಗೂ ಸರ್ಕಾರದಿಂದ ಸಿಗುವ ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಆಕೆಯ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಕಳ್ಳಾಟ ಬಯಲಾಗಿದೆ.

ಈ ಬಗ್ಗೆ ಆಕೆಯ ಪತಿ ಹೇಳಿಕೆ ನೀಡಿದ್ದು, “ಆಕೆ ಒಂದು ಬಾರಿಯೂ ಗರ್ಭಿಣಿಯಾಗಿಲ್ಲ. ಇಲ್ಲಿಯವೆರೆಗೆ ಆಕೆಯ ಗರ್ಭಿಣಿಯಂತೆ ನಟಿಸಿದ್ದಾಳೆ” ಎಂದಿದ್ದಾನೆ.

Advertisement

ಸದ್ಯ ಈಕೆಗೆ ಒಂದು ವರ್ಷ , ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement
Tags :
Advertisement