For the best experience, open
https://m.newskannada.com
on your mobile browser.
Advertisement

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು ಅನಿವಾರ್ಯ ಎಂದು ನೇಮಿರಾಜ ಶೆಟ್ಟಿ ಅಭಿಪ್ರಾಯಪಟ್ಟರು.
12:31 PM May 18, 2024 IST | Ashika S
ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ  ನೇಮಿರಾಜ ಶೆಟ್ಟಿ

ಉಡುಪಿ: ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು ಅನಿವಾರ್ಯ ಎಂದು ನೇಮಿರಾಜ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಅದಿತಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ ಕಲ್ಲಚ್ಚು ಕಲಾಕೃತಿಗಳ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಮುದ್ರಣ ಮಾಧ್ಯಮದ ಇತಿಹಾಸದ ಬಗ್ಗೆ ಹಾಗೂ ಕಲಾಕೃತಿಗಳ ಆಳವಾಗಿ ಬೆಳಕು ಚೆಲ್ಲಿದ ಅವರು ರವಿಮರ್ಮ ಅವರ ಕೊಡುಗೆಯನ್ನು ಪ್ರಸಂಶಿಸಿದರು.

Advertisement

ಕಲಾವಿದ ಡಾ. ಜನಾರ್ಧನ ಹಾವಂಜೆ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ ದೇವರನ್ನು ಮನುಷ್ಯರೂಪದಲ್ಲಿ ತೋರಿಸಿದ ಕಲಾವಿದ ರವಿ ವರ್ಮಾ ಅವರ ಕೊಡುಗೆ ಅಪಾರ. ಕಲ್ಲಚ್ಚು ಪ್ರತಿಗಳ ತಳಸ್ಪರ್ಶಿ ಅಧ್ಯಯನವಾಗಬೇಕು ಎಂದು ಹೇಳಿದರು.

ಚಿತ್ರ ಕೃತಿಗಳ ನಿರ್ಮಾಣದ ಜತೆಗೆ ಕಲಾಕೃತಿಗಳು ಸಾಮಾನ್ಯರಿಗೂ ತಲುಪುವಂತೆ ಮಾಡುವುದು ಒಂದು ವಿಶಿಷ್ಟ ಕಲೆ. ಪ್ರಾಚೀನ ಕಾಲದ ಮುದ್ರಣ ತಂತ್ರಜ್ಞಾನವನ್ನು ಬಳಸಿ ಬಹು ಪ್ರತಿಗಳ ನಿರ್ಮಾಣ ಮಾಡಿದ ಅನೇಕ ಕಲಾವಿದರ ಸಾಲಿಗೆ ರವಿ ವರ್ಮ ಅವರೂ ಸೇರುತ್ತಾರೆ ಎಂದು ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ತಿಳಿಸಿದರು.

ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ, ಶ್ರೀನಿವಾಸ್, ಪ್ರಸನ್ನ ಶ್ರೀನಿವಾಸ್, ವಿದುಷಿ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.

Advertisement
Tags :
Advertisement