For the best experience, open
https://m.newskannada.com
on your mobile browser.
Advertisement

ಇದು ಪರಿವರ್ತನೆಯ ಸಮಯ; ಭಾರತದ ಪ್ರಜಾಪ್ರಭುತ್ವ ಕಲ್ಪನೆ ಪುರಾತನವಾದುದು: ದ್ರೌಪದಿ ಮುರ್ಮು

ಗಣರಾಜ್ಯೋತ್ಸವದ ಪ್ರಯುಕ್ತ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶವು ಅಮೃತ ಕಾಲದ ಆರಂಭದಲ್ಲಿದ್ದು, ಇದು ಪರಿವರ್ತನೆಯ ಸಮಯ ಎಂದಿದ್ದಾರೆ.
08:33 PM Jan 25, 2024 IST | Maithri S
ಇದು ಪರಿವರ್ತನೆಯ ಸಮಯ  ಭಾರತದ ಪ್ರಜಾಪ್ರಭುತ್ವ ಕಲ್ಪನೆ ಪುರಾತನವಾದುದು  ದ್ರೌಪದಿ ಮುರ್ಮು

ನವದೆಹಲಿ: ಗಣರಾಜ್ಯೋತ್ಸವದ ಪ್ರಯುಕ್ತ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶವು ಅಮೃತ ಕಾಲದ ಆರಂಭದಲ್ಲಿದ್ದು, ಇದು ಪರಿವರ್ತನೆಯ ಸಮಯ ಎಂದಿದ್ದಾರೆ.

Advertisement

ʼನಾವು ಭಾರತದ ಜನರುʼ ಎಂದು ಸಂವಿಧಾನದ ಪೀಠಿಕೆ ಪ್ರಾರಂಭವಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ಪರಿಕಲ್ಪನೆ ಪಾಶ್ಚಿಮಾತ್ಯರ ವ್ಯವಸ್ತೆಗಿಂತ ಹಳೆಯದು ಎಂದು ಅವರು ಹೇಳಿದರು.

ರಾಮಮಂದಿರದ ಬಗ್ಗೆ ಮಾತನಾಡಿದ ಮುರ್ಮು, ಭಾರತದ ಇತಿಹಾಸದಲ್ಲಿ ಇದೊಂದು ಹೆಗ್ಗುರುತಾಗಲಿದೆ, ಹಾಗು ನ್ಯಾಯ ಪ್ರಕ್ರಿಯೆಯಲ್ಲಿ ಜನರ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.

Advertisement

ಅವರ ಭಾಷಣ ಸಂಜೆ ೭ರಿಂದ ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗಲಿವೆ.

ಈ ಸಮದರ್ಭದಲ್ಲಿ ರಾಷ್ಟ್ರಪತಿಗಳು ನಾರಿ ಶಕ್ತಿ ವಂದನ್ ಅಧಿನಿಯಮ, GDP ಬೆಳವಣಿಗೆ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ವಿಜ್ಞಾನಿಗಳು, ತಜ್ಞರು, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್, ಮಾನವ-ಮಿಷನ್ ಗಗನ್‌ಯಾನ್, G20 ಶೃಂಗಸಭೆ, ಕ್ರೀಡೆ, ಕಳೆದ ವರ್ಷದ ಏಷ್ಯನ್ ಗೇಮ್ಸ್, ಹೊಸ ಶಿಕ್ಷಣ ನೀತಿ ಸೇರಿದಂತೆ ಹಲವು ಮುಖ್ಯ ವಿಚಾರಗಳ ಬಗ್ಗೆ ಮಾತನಾಡಿದರು.

Advertisement
Tags :
Advertisement