ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದು, ಶುಕ್ರವಾರ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ. 
01:54 PM Jan 25, 2024 IST | Ashika S

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ 21 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದು, ಶುಕ್ರವಾರ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ.

Advertisement

ಗಮನಾರ್ಹ ಸೇವೆ ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ. ಐಜಿಪಿ ಪ್ರವೀಣ್ ಮಧುಕರ್ ಪವಾರ್, ಐಜಿಪಿ ರಮಣ್ ಗುಪ್ತಾ, ಎಎಸ್​​ಪಿ ಅನಿಲ್​​ಕುಮಾರ್.ಎಸ್, ಎಸಿಪಿ ಶಿವಗಂಗೆ ಪುಟ್ಟರಂಗಪ್ಪ, ಡಿವೈಎಸ್​​ಪಿ ರಘು ಕುಮಾರ್, ಎಸಿಪಿ ನಾರಾಯಣಸ್ವಾಮಿ, ಡಿವೈಎಸ್​​ಪಿ ಶ್ರೀನಿವಾಸ್ ರಾಜ್ ಬೆಟೋಲಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ವಿಶಿಷ್ಟ ಸೇವೆಗಾಗಿ ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್​ಪಿ ಸುಧೀರ್ ಮಹದೇವ್ ಹೆಗ್ಡೆಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

Advertisement

ಪೊಲೀಸ್​ ಇನ್ಸ್​​ಪೆಕ್ಟರ್​ ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಇನ್ಸ್​​ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಸಬ್​ ಇನ್ಸ್​​ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್, ವೈರಲೆಸ್ ಎಎಸ್​ಐ​ ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ ರಾಮ, ಎಸ್​​ಪಿ ಕಮಾಂಡೆಂಟ್ ಸಿಬ್ಬಂದಿ ನಾಗರಾಜ್ ಅಂಜಪ್ಪ, ಹೆಡ್​ ಕಾನ್ಸ್​ಟೇಬಲ್ ಸಿ.ವಿ.ಗೋವಿಂದರಾಜು, ಹೆಡ್​ ಕಾನ್ಸ್​ಟೇಬಲ್ ಮಣಿಕಂಠ ಮಂದರ್ ಬೈಲ್, ಎಎಸ್​ಐ​ ಸಮಂತ್.ಎಸ್, ಹೆಡ್​ ಕಾನ್ಸ್​ಟೇಬಲ್ ನರಸಿಂಹರಾಜು ಎಸ್.ಎನ್, ಎಸ್​ಐ ಪುಂಡಲಿಕ್ ಜೆ.ವಿ.ರಾಮರಾವ್ ನಾಯಕ್​ಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.

 

Advertisement
Tags :
LatetsNewsNewsKannadaಗಣರಾಜ್ಯೋತ್ಸವಪದಕಪದಕ ಪ್ರದಾನಪೊಲೀಸ್ ಅಧಿಕಾರಿರಾಷ್ಟ್ರಪತಿ
Advertisement
Next Article