For the best experience, open
https://m.newskannada.com
on your mobile browser.
Advertisement

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ ಮಾನಸಿಕವಾಗಿ ಜರ್ಝರಿತನಾಗುತ್ತಾನೆ ಹಾಗೂ ಕೆಲಸ ಬಿಟ್ಟೆ ಬಿಡಬೇಕೆಂಬ ಪರಿಸ್ಥಿತಿಗೆ ಒಳಗಾಗುತ್ತಾನೆ. ಉದ್ಯೋಗಿಗಳು ಕಚೇರಿಯಲ್ಲಿ ಕೆಲಸದ ಮೇಲೆ ಅಕ್ಕರೆ ಕಾಳಜಿ ತೋರದೆ ನಿರಾಸಕ್ತಿಯಿಂದ ಕೆಲಸ ಮಾಡುವುದು ಕೂಡ ಈ ಒತ್ತಡದ ಕಾರಣದಿಂದಾಗಿದೆ.
07:46 AM May 12, 2024 IST | Nisarga K
ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ   ಹಾಗಾದ್ರೆ ಇಲ್ಲಿದೆ  ಟಿಪ್ಸ್‌
ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ ಮಾನಸಿಕವಾಗಿ ಜರ್ಝರಿತನಾಗುತ್ತಾನೆ ಹಾಗೂ ಕೆಲಸ ಬಿಟ್ಟೆ ಬಿಡಬೇಕೆಂಬ ಪರಿಸ್ಥಿತಿಗೆ ಒಳಗಾಗುತ್ತಾನೆ. ಉದ್ಯೋಗಿಗಳು ಕಚೇರಿಯಲ್ಲಿ ಕೆಲಸದ ಮೇಲೆ ಅಕ್ಕರೆ ಕಾಳಜಿ ತೋರದೆ ನಿರಾಸಕ್ತಿಯಿಂದ ಕೆಲಸ ಮಾಡುವುದು ಕೂಡ ಈ ಒತ್ತಡದ ಕಾರಣದಿಂದಾಗಿದೆ.

Advertisement

ಹೆಚ್ಚಿನ ಜವಾಬ್ದಾರಿ, ವಿಶ್ರಾಂತಿ ಇಲ್ಲದೆ ಕೆಲಸ ಮಾಡುವುದು ಉದ್ಯೋಗಿಗಳಲ್ಲಿ ಬರ್ನ್‌ಔಟ್‌ಗೆ ಕಾರಣವಾಗುತ್ತದೆ. ಬರ್ನೌಔಟ್ ಎಂದರೆ ಮಾನಸಿಕವಾಗಿ ಹಾಗೂ ಜರ್ಜರಿತವಾಗಿ ಅಶಾಂತಿಯಿಂದ ಇರುವುದು ಎಂದಾಗಿದೆ. ಇದರಿಂದ ಮಾನಸಿಕ ಭಂಗ ಉಂಟಾಗುತ್ತದೆ ಎಂದು ಮೆಂಟರ್ ಹೆಲ್ತ್ ಎಕ್ಸ್‌ಪರ್ಟ್ ಉಪಾಸನಾ ಚಡ್ಡಾ ತಿಳಿಸುತ್ತಾರೆ.

ಬರ್ನೌಔಟ್‌ಗೆ ಕಾರಣಗಳೇನು?

Advertisement

ಕೆಲಸದಿಂದ ವಿಮುಕ್ತಿಪಡೆಯಲು ನಿರ್ಧರಿಸುವುದು ಇಲ್ಲವೇ ಕೆಲಸ ಮಾಡಲು ನಿರಾಸಕ್ತಿ ತೋರುವುದು ಕೂಡ ಈ ಬರ್ನ್ಔಟ್‌ನ ಕಾರಣವೇ ಆಗಿದೆ ಎಂದು ಉಪಾಸನಾ ಹೇಳಿದ್ದು, ಮೂಡ್ ಸ್ವಿಂಗ್ ಆಗಿರಬಹುದು ವೃತ್ತಿಯ ಮೇಲೆ ನಿರಾಸಕ್ತಿ ಮೂಡುವುದಿರಬಹುದು, ಮಾನಸಿಕವಾಗಿ ನೋವು ಅನುಭವಿಸುವುದು ಕೂಡ ಉದ್ಯೋಗಿ ತನ್ನ ತಲೆಯ ಮೇಲೆ ಹೊಂದಿರುವ ಜವಾಬ್ದಾರಿಗಳನ್ನು ಸೂಚಿಸುತ್ತದೆ ಎಂದು ಉಪಾಸನಾ ಹೇಳುತ್ತಾರೆ.

ನಿಮಗೆ ಸಂತೋಷ ನೀಡದ ಉದ್ಯೋಗದಲ್ಲಿರುವುದಕ್ಕೆ ಏನು ಕಾರಣ

ಉದ್ಯೋಗಿ ನಿರಾಸಕ್ತಿ ತೋರುವುದಾಗಿರಬಹುದು ಇಲ್ಲವೇ ಅಸಂತೋಷದಿಂದ ವರ್ತಿಸುವುದಾಗಿರಬಹುದು ಇದಕ್ಕೆ ಕಾರಣ ಅವರು ಮಾಡುತ್ತಿರುವ ಉದ್ಯೋಗವಾಗಿರಬಹುದು. ತಮ್ಮ ಉದ್ಯೋಗ ಸಂತೋಷ ನೀಡದೇ ಇದ್ದಲ್ಲಿ ಅದು ಅವರಲ್ಲಿ ನಿರಾಸಕ್ತಿ ಹಾಗೂ ಒತ್ತಡವನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರಸ್ತುತ ಸ್ಥಿತಿಗತಿ, ಭಾವನಾತ್ಮಕ ಏರುಪೇರುಗಳು, ಆರ್ಥಿಕ ಅಂಶಗಳು, ಸಂಬಂಧದ ಮಹತ್ವದ ಕುರಿತು ಯೋಚಿಸಿ. ಆದಷ್ಟು ಹೊಣೆಗಾರಿಕೆಗಳನ್ನು ತಗ್ಗಿಸಲು ನೋಡಿ. ಇಲ್ಲವೇ ವೃತ್ತಿ ಬದಲಾವಣೆ ಮಾಡಿ ಎಂದು ಉಪಾಸನಾ ಸಲಹೆ ನೀಡುತ್ತಾರೆ.

ಈ ಸಮಯದಲ್ಲಿ ಏನು ಮಾಡಬೇಕು?

ಯಶಸ್ಸಿನ ಅತ್ಯಂತ ಉನ್ನತ ಸ್ಥಾನದಲ್ಲಿರುವಂತೆ ಕನಸು ಕಾಣಿ ಹಾಗೂ ನಿಮ್ಮ ಜೀವನ ಇದೇ ಸ್ಥಾನದಲ್ಲಿರಬೇಕೆಂದು ಬಯಸಿ. ಗುರಿಯನ್ನು ಹೊಂದಿಸಿ ಹಾಗೂ ಆ ಗುರಿ ಉದ್ದೇಶಕ್ಕೆ ತಕ್ಕಂತೆ ಜೀವನವನ್ನು ಮುಂದುವರಿಸಿ

ಒತ್ತಡದಿಂದ ಮುಕ್ತಿ ಹೊಂದಿ

ತೀವ್ರ ಒತ್ತಡಕ್ಕೆ ನೀವು ಏಕೆ ಒಳಗಾಗುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ಹೆಚ್ಚುವರಿ ಕೆಲಸದ ಹೊಣೆ ನಿಮ್ಮ ಭುಜದ ಮೇಲಿದ್ದರೆ ಅದನ್ನು ತಗ್ಗಿಸಲು ಪ್ರಯತ್ನಿಸಿ ನಿಮ್ಮ ಮೇಲಾಧಿಕಾರಿಯೊಂದಿಗೆ ಚರ್ಚಿಸಿ. ಯಾವುದು ಆದ್ಯತೆಯೇ ಆ ಕೆಲಸಕ್ಕೆ ಹೆಚ್ಚಿನ ಲಕ್ಷ್ಯವಹಿಸಿ.

ಯೋಗ, ಧ್ಯಾನ ಮಾಡಿ
ಮಾನಸಿಕ ಶಾಂತಿ ಹೊಂದಲು ಯೋಗ ಉತ್ತಮ ಆಯ್ಕೆಯಾಗಿದೆ. ಯೋಗದ ಮೂಲಕ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಳ್ಳಿ. ನಿಧಾನವಾಗಿ ಕುಳಿತು ಯೋಚಿಸಿ ಕೆಲಸ ಮಾಡಿ. ಸುಖಾಸುಮ್ಮನೆ ಪ್ರತಿಯೊಂದನ್ನು ನಿಮ್ಮ ಮೇಲೆ ಹಾಕಿಕೊಂಡು ಒತ್ತಡದಿಂದ ಕೆಲಸ ಮಾಡದಿರಿ

ವಾರಾಂತ್ಯದಲ್ಲ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ಹೊರಗಡೆ ಅಡ್ಡಾಡಿ ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ. ಚಲನಚಿತ್ರ ವೀಕ್ಷಿಸಿ ಹೀಗೆ ನಿಮ್ಮ ಸುಖ ಶಾಂತಿಗೆ ಗಮನ ಹರಿಸಿ

Advertisement
Tags :
Advertisement