ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲಂಡನ್‌ ನಲ್ಲಿ ಹಿಂದೂ ಸಮುದಾಯವನ್ನು ಬರಮಾಡಿಕೊಂಡು ದೀಪಾವಳಿ ಆಚರಿಸಿದ ರಿಷಿ ದಂಪತಿ

ಲಂಡನ್: ಹಿಂದೂ ಸಂಸ್ಕೃತಿಯನ್ನು ಪ್ರೀತಿ, ಗೌರವಾದರಗಳಿಂದ ಕಾಣುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬುಧವಾರ(ನ.08) ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪಾವಳಿ ಹಬ್ಬಕ್ಕೆ ಮುನ್ನ ಲಂಡನ್ ನ ತಮ್ಮ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಗೆ ಹಿಂದೂ ಸಮುದಾಯದವರನ್ನು ಅತಿಥಿಗಳಾಗಿ ಆಹ್ವಾನಿಸಿ ಹಬ್ಬ ಆಚರಿಸಿದರು.
03:26 PM Nov 09, 2023 IST | Ashitha S

ಲಂಡನ್: ಹಿಂದೂ ಸಂಸ್ಕೃತಿಯನ್ನು ಪ್ರೀತಿ, ಗೌರವಾದರಗಳಿಂದ ಕಾಣುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬುಧವಾರ(ನ.08) ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪಾವಳಿ ಹಬ್ಬಕ್ಕೆ ಮುನ್ನ ಲಂಡನ್ ನ ತಮ್ಮ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಗೆ ಹಿಂದೂ ಸಮುದಾಯದವರನ್ನು ಅತಿಥಿಗಳಾಗಿ ಆಹ್ವಾನಿಸಿ ಹಬ್ಬ ಆಚರಿಸಿದರು.

Advertisement

ಇದರ ವಿಡಿಯೊ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪ ಹಚ್ಚಿ ಹಬ್ಬವನ್ನು ಆಚರಿಸಿದ್ದಾರೆ, ಅವರ ಸುತ್ತಲೂ ಅನಿವಾಸಿ ಭಾರತೀಯರು ಖುಷಿಯಿಂದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಭಾರತೀಯ ಮೂಲದ ಹಿಂದೂ ಸಮುದಾಯದವರೊಂದಿಗೆ ಪ್ರಧಾನಿ ರಿಷಿ ಸುನಕ್ ಮಾತುಕತೆ ನಡೆಸಿದ್ದಾಆರೆ. ಇಂಗ್ಲೆಂಡಿನಲ್ಲಿರುವ ಪ್ರತಿಯೊಬ್ಬರಿಗೂ ಮತ್ತು ಜಗತ್ತಿನ ಸುತ್ತ ಇರುವ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು ಎಂದು ಬ್ರಿಟನ್ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಬ್ರಿಟನ್​​ ಪ್ರಧಾನಿ ರಿಷಿ ಸುನಕ್ ಅವರು ಇದು ಕತ್ತಲೆಯ ಮೇಲೆ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ. ಇಂಗ್ಲೆಂಡಿನಲ್ಲಿರುವ ಪ್ರತಿಯೊಬ್ಬರಿಗೂ ಮತ್ತು ಜಗತ್ತಿನ ಸುತ್ತಮುತ್ತ ಇರುವ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

Advertisement

ಇನ್ನು ರಿಷಿ ಸುನಕ್‌ ದಂಪತಿ ದೀಪಾವಳಿ ಹಬ್ಬವನ್ನು ಆಚರಿಸಿರುವ ಫೋಟೊವನ್ನು ಸಿದ್ದಾರ್ಥ್‌ ಸಿಬಲ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Advertisement
Tags :
indiaLatestNewsNewsKannadaದೀಪಾವಳಿಬೆಂಗಳೂರುರಿಷಿರಿಷಿ ಸುನಕ್
Advertisement
Next Article