For the best experience, open
https://m.newskannada.com
on your mobile browser.
Advertisement

ಕರಾವಳಿಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ: ರಮಾನಾಥ ರೈ

 ರಾಜ್ಯದಲ್ಲಿ 18 ರಿಂದ 20 ಸ್ಥಾನಗಳು ಗೆಲ್ಲುವ ವಿಶ್ವಾಸ ಇದೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತದೆ. ಕರಾವಳಿಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
04:31 PM Mar 16, 2024 IST | Ashika S
ಕರಾವಳಿಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ  ರಮಾನಾಥ ರೈ

ಮಂಗಳೂರು:  ರಾಜ್ಯದಲ್ಲಿ 18 ರಿಂದ 20 ಸ್ಥಾನಗಳು ಗೆಲ್ಲುವ ವಿಶ್ವಾಸ ಇದೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತದೆ. ಕರಾವಳಿಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಕೆಲಸ ಮಾಡಿಲ್ಲ ಅಂತ ಅಭ್ಯರ್ಥಿ ಬದಲಾವಣೆ ಮಾಡಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

Advertisement

ಮಂಗಳೂರಿನ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅನೇಕ ಹಗರಣಗಳು ನಡೆಸಿದೆ. ಪಾಕಿಸ್ತಾನದ ಮೂಲದ ಕಂಪೆನಿಯಿಂದಲೂ ಬಿಜೆಪಿ ದೇಣಿಗೆ ಪಡೆದಿದೆ. 50% ಚುನಾವಣಾ ಬಾಂಡ್ ಬಿಜೆಪಿಗೆ ಹೋಗಿದೆ, ಕಾಂಗ್ರೆಸ್‌ಗೆ ಶೇಕಡಾ 11 ರಷ್ಟು ಮಾತ್ರ ಸಿಕ್ಕಿದೆ ಎಂದರು.

ಸಂವಿಧಾನದ ಬದಲಾವಣೆ ಬಗ್ಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೇಳಿಕೆ ನೀಡಿದ್ದಾರೆ, ದುರ್ಬಲ ವರ್ಗಕ್ಕೆ ಸಿಗುವ ಸೌಲಭ್ಯ ಸಿಗದಂತೆ ಮಾಡುವ ಉದ್ದೇಶ ಅವರದ್ದು ಎಂದರು.

Advertisement

Advertisement
Tags :
Advertisement