ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಹಮದಾಬಾದ್‌: ಇಂದಿನಿಂದ ಪ್ರೊ ಕಬಡ್ಡಿ ಕ್ರೀಡಾ ಹಬ್ಬ

ವಿಶ್ವಕಪ್‌ ಕ್ರಿಕೆಟ್‌ ಬಳಿಕ ಬಹುನಿರೀಕ್ಷಿತ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌(ಪಿಕೆಎಲ್‌)ಗೆ ಅಹಮದಾಬಾದ್‌ನಲ್ಲಿ ಶನಿವಾರ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತೆಲುಗು ಟೈಟಾನ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ದಿನದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಯುಪಿ ಯೋಧಾಸ್‌ ಸೆಣಸಾಡಲಿವೆ.
11:43 AM Dec 02, 2023 IST | Ashika S

ಅಹಮದಾಬಾದ್‌: ವಿಶ್ವಕಪ್‌ ಕ್ರಿಕೆಟ್‌ ಬಳಿಕ ಬಹುನಿರೀಕ್ಷಿತ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌(ಪಿಕೆಎಲ್‌)ಗೆ ಅಹಮದಾಬಾದ್‌ನಲ್ಲಿ ಶನಿವಾರ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತೆಲುಗು ಟೈಟಾನ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ದಿನದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಯುಪಿ ಯೋಧಾಸ್‌ ಸೆಣಸಾಡಲಿವೆ.

Advertisement

ಕೋವಿಡ್‌ ಬಳಿಕ ಈ ಬಾರಿ ಟೂರ್ನಿ ಮತ್ತೆ ಹಳೆಯ ಮಾದರಿಯಲ್ಲಿ ನಡೆಯಲಿದ್ದು, 12 ನಗರಗಳು ಆತಿಥ್ಯ ವಹಿಸಲಿವೆ. ಸದ್ಯ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದೆ. 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ಡಿಸ್ನಿ ಸ್ಟಾರ್‌ ಸಂಸ್ಥೆ ನಿರ್ಧರಿಸಿದೆ. ಪ್ರೇಕ್ಷಕರು ಮೊಬೈಲ್‌ ಆ್ಯಪ್‌ ಮೂಲಕ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ಟೂರ್ನಿ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡ ಇತರ ತಂಡಗಳ ವಿರುದ್ಧ ಲೀಗ್‌ ಹಂತದಲ್ಲಿ 2 ಬಾರಿ ಆಡಲಿವೆ. ಬಹುತೇಕ ದಿನ ಎರಡೆರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8ಕ್ಕೆ, 2ನೇ ಪಂದ್ಯ 9 ಗಂಟೆಗೆ ಆರಂಭಗೊಳ್ಳಲಿದೆ.

Advertisement

Advertisement
Tags :
LatetsNewsNewsKannadaಅಹಮದಾಬಾದ್ಗುಜರಾತ್​ ಜೈಂಟ್ಸ್​ತೆಲುಗು ಟೈಟಾನ್ಸ್‌ಪ್ರೊ ಕಬಡ್ಡಿವಿಶ್ವಕಪ್‌ ಕ್ರಿಕೆಟ್‌
Advertisement
Next Article