For the best experience, open
https://m.newskannada.com
on your mobile browser.
Advertisement

ʼನಂದು ತುಂಬಾ ದೊಡ್ಡದು. . .ಅವನಿಗಿಂತ ನಿಂದು ಚಿಕ್ಕದುʼ: 'ಯುಐ' ಚಿತ್ರದ ಚೀಪ್ ಸಾಂಗ್ ರಿಲೀಸ್

ಪ್ರೇಮಿಗಳ ದಿನದಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಯುಐ ಸಿನಿಮಾದ ಹಾಡನ್ನ ಬಿಡುಗಡೆ ಮಾಡಿದ್ದಾರೆ. ಯುಐ ಚಿತ್ರದಲ್ಲಿ ಉಪೇಂದ್ರ ನಟಿಸುವುದರ ಜೊತೆಗೆ ನಿರ್ದೇಶನವನ್ನು ಮಾಡ್ತಿದ್ದಾರೆ.ಹೀಗಾಗಿ ಚಿತ್ರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸದ್ಯ ಚಿತ್ರದ ಚೀಪ್ ಹಾಡೊಂದು ಬಿಡುಗಡೆ ಆಗಿದೆ.
04:58 PM Feb 14, 2024 IST | Ashitha S
ʼನಂದು ತುಂಬಾ ದೊಡ್ಡದು     ಅವನಿಗಿಂತ ನಿಂದು ಚಿಕ್ಕದುʼ   ಯುಐ  ಚಿತ್ರದ ಚೀಪ್ ಸಾಂಗ್ ರಿಲೀಸ್

ಬೆಂಗಳೂರು: ಪ್ರೇಮಿಗಳ ದಿನದಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಯುಐ ಸಿನಿಮಾದ ಹಾಡನ್ನ ಬಿಡುಗಡೆ ಮಾಡಿದ್ದಾರೆ. ಯುಐ ಚಿತ್ರದಲ್ಲಿ ಉಪೇಂದ್ರ ನಟಿಸುವುದರ ಜೊತೆಗೆ ನಿರ್ದೇಶನವನ್ನು ಮಾಡ್ತಿದ್ದಾರೆ.ಹೀಗಾಗಿ ಚಿತ್ರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸದ್ಯ ಚಿತ್ರದ ಚೀಪ್ ಹಾಡೊಂದು ಬಿಡುಗಡೆ ಆಗಿದೆ.

Advertisement

"ಚೀಪ್.. ಚೀಪ್.. ಎಲ್ಲಾ ಚೀಪ್ ಚೀಪ್.. ನಂದು ತುಂಬಾ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ದು.." ಥೋ.. ಇದು ಡಬಲ್ ಮೀನಿಂಗ್ ಹಾಡಾ ಅಥವಾ ಗೂಢಾರ್ಥ ಏನಾದರೂ ಇದೆಯಾ ಗೊತ್ತಿಲ್ಲ. ಒಟ್ನಲ್ಲಿ ನಟ, ನಿರ್ದೇಶಕ ಉಪೇಂದ್ರ ಪ್ರೇಮಿಗಳ ದಿನದಂದು ತಮ್ಮ ಯುಐ ಸಿನಿಮಾದ ಹಾಡಿನ ತುಣುಕೊಂದನ್ನು ಬಿಡುಗಡೆ ಮಾಡಿ ಮತ್ತೆ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ.

ಹಾಡಿನ ಈ ಸಣ್ಣ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಪೂರ್ಣ ಹಾಡನ್ನು ಇದೇ ತಿಂಗಳು 26ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಅಜನೀಶ್​ ಬಿ. ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಜಯ್​ ಪ್ರಕಾಶ್​, ನಕಾಶ್​ ಅಜೀಜ್​, ದೀಪಕ್​ ಬ್ಲ್ಯೂ ಅವರು ‘ಚೀಪ್​’ ಹಾಡಿಗೆ ಧ್ವನಿ ನೀಡಿದ್ದಾರೆ.

Advertisement

Advertisement
Tags :
Advertisement