For the best experience, open
https://m.newskannada.com
on your mobile browser.
Advertisement

ಉಡುಪಿ: ಮತಾಂತರ ಮಾಡಲು ಬಂದವರನ್ನು ಅಟ್ಟಾಡಿಸಿಕೊಂಡು ಓಡಿಸಿದ ಸ್ಥಳೀಯ ವ್ಯಕ್ತಿ

ಮತಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಕರಾವಳಿಯಾದ್ಯಂತ ಆಗಾಗ ಸದ್ದು ಮಾಡುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಉಪ್ಪಿನಕೋಟೆ ಬಳಿ ಈ ಘಟನೆ ಸಂಭವಿಸಿದೆ.
02:58 PM Feb 23, 2024 IST | Gayathri SG
ಉಡುಪಿ  ಮತಾಂತರ ಮಾಡಲು ಬಂದವರನ್ನು ಅಟ್ಟಾಡಿಸಿಕೊಂಡು ಓಡಿಸಿದ ಸ್ಥಳೀಯ ವ್ಯಕ್ತಿ

ಉಡುಪಿ: ಮತಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಕರಾವಳಿಯಾದ್ಯಂತ ಆಗಾಗ ಸದ್ದು ಮಾಡುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಉಪ್ಪಿನಕೋಟೆ ಬಳಿ ಈ ಘಟನೆ ಸಂಭವಿಸಿದೆ.

Advertisement

ತಮ್ಮ ಧರ್ಮದ ಪ್ರಚಾರಕ್ಕಾಗಿ ಇಬ್ಬರು ಮಹಿಳೆಯರು ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಗೆ ಬಂದಿದ್ದರು. ತಮ್ಮ ಧರ್ಮದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಕೋಪಗೊಂಡ ಸ್ಥಳೀಯನೊಬ್ಬ, ಮತಾಂತರ ಮಾಡಲು ಬಂದಿದ್ದೀರ ? ಎಂದು ಅಕ್ರೋಶ ವ್ಯಕ್ತಪಡಿಸಿ ಆವಾಜ್ ಹಾಕಿದ್ದಾರೆ. ಬಳಿಕ ದೊಣ್ಣೆ ಹಿಡಿದು ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ಇನ್ನೊಮ್ಮೆ ಈ ಭಾಗಕ್ಕೆ ಬಂದರೆ ಜಾಗ್ರತೆ ಎಂದು ಗದರಿಸಿ ಅವರನ್ನು ಓಡಿಸಿದ್ದಾರೆ. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮತಾಂತರಕ್ಕೆ ಬಂದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

Advertisement
Tags :
Advertisement