For the best experience, open
https://m.newskannada.com
on your mobile browser.
Advertisement

ಕಂಪ್ಯೂಟರ್‌,ಮೊಬೈಲ್‌ನಿಂದ ನಮ್ಮ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

ಕಣ್ಣು ನಮ್ಮ ದೇಹದ ಇತರೆ ಭಾಗಗಳಂತೆ ಅಲ್ಲ, ಕಣ್ಣು ಅತೀ ಸೂಕ್ಷ್ಮವಾದ ಭಾಗ ಹಾಗಾಗಿ ಅದನ್ನು ಈಗಿನ ಡಿಜಿಟಲ್‌ ಜಮಾನದಲ್ಲಿ ರಕ್ಷಸಿಕೊಳ್ಳುವುದು ತುಂಬ ಅಗತ್ಯ. ಕಣ್ಣಿನ ಬೆಲೆ ಕುರುಡನಿಗೆ ತಿಳಿದುರುತ್ತದೆ. ಆದರೆ ಈಗಿನ ಯುಗ ಡಿಜಿಟಲ್‌ಮಯಬ ಯುಗ ಮೊಬೈಲ್‌ ಕಂಪ್ಯೂಟರ್‌ಯಿಂದಲೆ ಜೀವನ ಸಾಗಿಸಬೇಕು. ಹಾಗಾಗಿ ಬಹಳಷ್ಟು ಮಂದಿ ಗಂಟೆಗಟ್ಟಲೆ ಕಂಪ್ಯೂಟರ್‌ ಸ್ಕ್ರೀನ್‌ ಮುಂದೆ ಕುಳಿತಿರುತ್ತಾರೆ ಇದರಿಂದ ಕಣ್ಣಿಗರ ಹೆಚ್ಚಿ ತ್ರಾಸಗುತ್ತದೆ ಅಲ್ಲದೆ ಹಲವು ಸಮಸ್ಯೆಗಳು ಕಾಡಲು ಶುರುವಾಗುತ್ತವೆ.
02:34 PM Apr 04, 2024 IST | Nisarga K
ಕಂಪ್ಯೂಟರ್‌ ಮೊಬೈಲ್‌ನಿಂದ ನಮ್ಮ ಕಣ್ಣಿನ ರಕ್ಷಣೆ ಹೇಗೆ  ಇಲ್ಲಿದೆ ಮಾಹಿತಿ
ಕಂಪ್ಯೂಟರ್‌,ಮೊಬೈಲ್‌ನಿಂದ ನಮ್ಮ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

ಕಣ್ಣು ನಮ್ಮ ದೇಹದ ಇತರೆ ಭಾಗಗಳಂತೆ ಅಲ್ಲ, ಕಣ್ಣು ಅತೀ ಸೂಕ್ಷ್ಮವಾದ ಭಾಗ ಹಾಗಾಗಿ ಅದನ್ನು ಈಗಿನ ಡಿಜಿಟಲ್‌ ಜಮಾನದಲ್ಲಿ ರಕ್ಷಸಿಕೊಳ್ಳುವುದು ತುಂಬ ಅಗತ್ಯ. ಕಣ್ಣಿನ ಬೆಲೆ ಕುರುಡನಿಗೆ ತಿಳಿದುರುತ್ತದೆ. ಆದರೆ ಈಗಿನ ಯುಗ ಡಿಜಿಟಲ್‌ಮಯಬ ಯುಗ ಮೊಬೈಲ್‌ ಕಂಪ್ಯೂಟರ್‌ಯಿಂದಲೆ ಜೀವನ ಸಾಗಿಸಬೇಕು. ಹಾಗಾಗಿ ಬಹಳಷ್ಟು ಮಂದಿ ಗಂಟೆಗಟ್ಟಲೆ ಕಂಪ್ಯೂಟರ್‌ ಸ್ಕ್ರೀನ್‌ ಮುಂದೆ ಕುಳಿತಿರುತ್ತಾರೆ ಇದರಿಂದ ಕಣ್ಣಿಗರ ಹೆಚ್ಚಿ ತ್ರಾಸಗುತ್ತದೆ ಅಲ್ಲದೆ ಹಲವು ಸಮಸ್ಯೆಗಳು ಕಾಡಲು ಶುರುವಾಗುತ್ತವೆ.

Advertisement

  • ಕಣ್ಣು ಕೆಂಪಾಗುವುದು, ಉರಿ ಮತ್ತು ನೀರು ಬರುವುದು
  • ಒಣ ಅಥವಾ ಊದಿದ ಕಣ್ಣುಗಳು
    ಕಣ್ಣಿನಲ್ಲಿ ಮರಳಿನ ಕಣ ಇರುವ ಅನುಭವ ಅಥವಾ ಕಸ ಬಿದ್ದಂತೆ ಆಗುವುದು
    ದೃಷ್ಟಿ ಕೇಂದ್ರೀಕರಿಸಲು ಆಗದೆ ಇರುವುದು
    ಅಕ್ಷರಗಳು ಜತೆಜತೆಯಾಗಿ ಸಾಗಿದಂತೆ ಆಗುವುದು
    ಕಣ್ಣಿನ ಸುತ್ತಲು ನೋವು
    ದೃಷ್ಟಿ ಮಂಜಾಗುವುದು ಅಥವಾ ಎರಡೆರಡು ಕಾಣಿಸುವುದು
    ತಲೆನೋವು ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇದಕ್ಕೆ ಪರಿಹಾರ ಏನು?
ಕೆಲಸದ ಮಧ್ಯೆ ವಿರಾಮ ತೆಗೆದುಕೊಳ್ಳಿ: ಒಂದು ಸಾಧನದ ಮುಂದೆ ದೀರ್ಘಾವಧಿಯವರೆಗೆ ಕುಳಿತುಕೊಳ್ಳುವಾಗ 20-20-20 ನಿಯಮವನ್ನು ನೆನಪಿಟ್ಟುಕೊಳ್ಳಿ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರೆ ಪ್ರತಿ 20 ನಿಮಿಷಗಳಿಗೊಮ್ಮೆ ನಿಮ್ಮ ಕಣ್ಣನ್ನು ಬೇರೆಡೆ ಹಾಯಿಸಿ. 20 ನಿಮಿಷಗಳಿಗೆ ಬ್ರೇಕ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ನಿಮಗೆ ಸಾಧ್ಯವಾಗುವಾಗ ನಿಗದಿತ ಸಮಯದಲ್ಲಿ ತೆಗೆದುಕೊಳ್ಳಿ. ಕಣ್ಣನ್ನು ಆಗಾಗ ಮುಚ್ಚಿ-ತೆರೆಯುವುದು ಮಾಡುತ್ತಿರಿ. ಇದರಿಂದ ಒಣಗಿಹೋಗುವುದನ್ನು ತಡೆಯಬಹುದು. ನಿಮ್ಮ ಕಣ್ಣು ಒಣಗಿ ಹೋಗುವ ಸಮಸ್ಯೆ ಹೊಂದಿದ್ದರೆ ಔಷಧಾಲಯಗಳಿಂದ ಐ ಡ್ರಾಪ್ಸ್ ತಂದು ಅದನ್ನು ಹಾಕುತ್ತಿರಿ.

ಕಣ್ಣುಗಳಿಗೆ ವ್ಯಾಯಾಮ ನೀಡಿ: ಯೋಗ ಮಾಡುವುದರಿಂದ ದೇಹಕ್ಕೆ, ಅಂಗಾಂಗಗಳಿಗೆ ಹೇಗೆ ಸಹಾಯವಾಗುತ್ತದೆಯೋ ಅದೇ ರೀತಿ ಕಣ್ಣುಗಳಿಗೆ ಸಹ ಕೆಲವು ವ್ಯಾಯಾಮವಿರುತ್ತದೆ. ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿರುವಾಗ ಕಣ್ಣನ್ನು ಸುತ್ತಲೂ ಹೊರಳಿಸುವುದು, ಹತ್ತಿರ ಮತ್ತು ದೂರದ ವಸ್ತುಗಳ ಕಡೆ ನೋಡುವುದು, ವಿರಾಮ ಎನಿಸಲು ಸುಸ್ತಾದಾಗ ಕಣ್ಣುಗಳ ಸುತ್ತ ಕೈಯಿಂದ ಉಜ್ಜುವುದು ಇತ್ಯಾದಿಗಳನ್ನು ಮಾಡಬೇಕು. ಇಂತಹ ಅಭ್ಯಾಸಗಳನ್ನು ದಿನಕ್ಕೆ ಸುಮಾರು 20 ನಿಮಿಷ ಮಾಡುತ್ತಿರಬೇಕು.

Advertisement

ಸಾಧನಗಳನ್ನು ಪರೀಕ್ಷಿಸುತ್ತಿರಿ: ನಿಮ್ಮ ಕಂಪ್ಯೂಟರ್ ಪರದೆ ಕಣ್ಣಿಗೆ ಹೊಡೆಯುವಂತೆ ತೀಕ್ಷ್ಣವಾಗಿರಬಾರದು. ಕಂಪ್ಯೂಟರ್ ಕುಳಿತುಕೊಳ್ಳುವ ಕುರ್ಚಿಯ ಎತ್ತರ ಕೂಡ ಮುಖ್ಯವಾದದ್ದು. ಮೊಬೈಲನ್ನು ಬಳಸುವಾಗ ಮುಖಕ್ಕೆ ಹತ್ತಿರವಾಗಿ ಬಳಸಬಾರದು. ಪರದೆಯ ಮೇಲಿನ ಅಕ್ಷರದ ಗಾತ್ರವನ್ನು ಹೆಚ್ಚಿಸಿ. ನಿಮ್ಮ ಕಣ್ಣಿಗೆ ಸರಿಯಾಗುವ ರೀತಿಯಲ್ಲಿ ಮೊಬೈಲ್ ಸ್ಕ್ರೀನ್ ನ ಬೆಳಕಿನ ಪ್ರಕಾಶವನ್ನು ಹೊಂದಿಸಿಕೊಳ್ಳಿ.

20-20-20 ನಿಯಮವನ್ನು ಅನುಸರಿಸಿ:

ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಠ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ. ಇದು ನಿಮ್ಮ ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.

ಬೆಚ್ಚಗಿನ ಮಸಾಜ್‌

ದೀರ್ಘ ಕಾಲ ಕಂಪ್ಯೂಟರ್‌ ನೋಡುವ ಅನಿವಾರ್ಯತೆಯಿದ್ದರೆ, ಬೆಚ್ಚಗಿನ ನೀರಲ್ಲಿ ಮೃದು ಮತ್ತು ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಅದ್ದಿ, ಹಿಂಡಿ. ಅದು ಬೆಚ್ಚಗಿರುವವರೆಗೆ ಕಣ್ಣಿಗೆ ಇರಿಸಿಕೊಳ್ಳಿ. ಒಂದೊಂದು ಕಣ್ಣಿಗೂ ಕನಿಷ್ಟ ಮೂರು ಬಾರಿ ಮಾಡಿ. ಇದರಿಂದ ಕಣ್ಣಿನ ಆಯಾಸ ಕಡಿಮೆ ಮಾಡಬಹುದು. ಮಾತ್ರವಲ್ಲ, ಕೈ ಶುದ್ಧಗೊಳಿಸಿಕೊಳ್ಳಿ. ಕಣ್ಣಿನ ಸುತ್ತಲೂ ಮೃದುವಾಗಿ ಮಸಾಜ್‌ ಮಾಡಿ. ಅಗತ್ಯವಿದ್ದರೆ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಮಸಾಜ್‌ಗೆ ಉಪಯೋಗಿಸಬಹುದು. ಇದರಿಂದ ಈ ಭಾಗದಲ್ಲಿ ರಕ್ತ ಸಂಚಾರ ವೃದ್ಧಿಸಿ. ಆಯಾಸ ಕಡಿಮೆಯಾಗುತ್ತದೆ. ಕಣ್ಣಿನ ಸುತ್ತಲೂ ಉಬ್ಬಿದಂತಾಗಿದ್ದರೆ, ಅಲೊವೇರಾ ಜೆಲ್‌ ಹಾಕಿಯೂ ಮಸಾಜ್‌ ಮಾಡಬಹುದು. ಆದರೆ ಇವೆಲ್ಲಾ ಕಣ್ಣಿನ ಹೊರಭಾಗಕ್ಕೇ ಸೀಮಿತಗೊಳಿಸಬೇಕು. ವೈದ್ಯರು ಕೊಟ್ಟ ಡ್ರಾಪ್ಸ್‌ ಬಿಟ್ಟರೆ, ಇನ್ನೇನ್ನೇನ್ನೂ ಕಣ್ಣೊಳಗೆ ಹಾಕುವಂತಿಲ್ಲ.

ಕಂಪ್ಯೂಟರ್ ಕನ್ನಡಕ ಧರಿಸಿ: ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವಾಗ ಕಂಪ್ಯೂಟರ್ ಐಗ್ಲಾಸ್ ಗಳನ್ನೇ ಬಳಸಿದರೆ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಗ್ಲಾಸ್ ನ ಕೋಟಿಂಗ್
ಕಂಪ್ಯೂಟರ್ ಸ್ಕ್ರೀನ್ ಮತ್ತು ಅದರ ಸುತ್ತಮುತ್ತಲಿನ ರಿಪ್ಲೆಕ್ಷನ್ ನ್ನು ಇದು ಕಡಿಮೆ ಮಾಡುವುದು.

ಯುವಿ ಕೋಟಿಂಗ್
ಲೈಟ್‌ ಗಳಿಂದ ಹೆಚ್ಚಾಗಿ ನೀಲಿ ಕಿರಣಗಳು ಬರುವುದು. ಇದನ್ನು ಯುವಿ ಕೋಟಿಂಗ್ ಮೂಲಕ ಕಡಿಮೆ ಮಾಡಬಹುದು.

ಉತ್ತಮ ಆಹಾರ ಸೇವಿಸಿ: ಯಾವುದೇ ಸಾಧನಗಳನ್ನು ಬಳಸಿದರೂ ಅಂತಿಮವಾಗಿ ನಮ್ಮ ಆರೋಗ್ಯ ನಾವು ಸೇವಿಸುವ ಆಹಾರವನ್ನು ಅವಲಂಬಿಸುತ್ತಿರುತ್ತದೆ. ವಿಟಮಿನ್, ಮಿನರಲ್ ಗಳು ಹೆಚ್ಚಾಗಿರುವ ಆಹಾರಗಳು ಕಣ್ಣಿಗೆ ಒಳ್ಳೆಯದು. ಸಾಕಷ್ಟು ನೀರು ಸೇವಿಸಿ, ರಾತ್ರಿ ಸಾಕಷ್ಟು ನಿದ್ದೆ ಮಾಡಿ, ಹಸಿರು ತರಕಾರಿಗಳು, ಕ್ಯಾರೆಟ್, ಪಪ್ಪಾಯಿ, ಖರ್ಜೂರಗಳಲ್ಲಿ ಸಾಕಷ್ಟು ವಿಟಮಿನ್ ಎ ಇರುತ್ತದೆ.

Advertisement
Advertisement