ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಿಎಸ್ಐ ಹುದ್ದೆಗೆ ನೇಮಕಾತಿ ಪರೀಕ್ಷೆ: ಜಿ. ಪರಮೇಶ್ವರ್

ಪಿಎಸ್ಐ ೫೪೫ ಹುದ್ದೆಗಳ ನೇಮಕಾತಿಯ ಮರುಪರೀಕ್ಷೆ ಸುಗಮವಾಗಿ ನಡೆದಿದೆ. ಮುಂದಿನ ಹಂತದಲ್ಲಿ ೪೦೩ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಈ ಎರಡೂ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತೆ ೬೬೦ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.
08:57 PM Jan 24, 2024 IST | Maithri S

ಬೆಂಗಳೂರು: ಪಿಎಸ್ಐ ೫೪೫ ಹುದ್ದೆಗಳ ನೇಮಕಾತಿಯ ಮರುಪರೀಕ್ಷೆ ಸುಗಮವಾಗಿ ನಡೆದಿದೆ. ಮುಂದಿನ ಹಂತದಲ್ಲಿ ೪೦೩ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಈ ಎರಡೂ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತೆ ೬೬೦ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಮುಂದಿನ ಎರಡು ವರ್ಷಗಳ ಒಳಗೆ ೬೬೦ ಹುದ್ದೆಗಳ ನೇಮಕಾತಿಗಳೂ ಪೂರ್ಣಗೊಳ್ಳಲಿವೆʼ ಎಂದರು.

ʼ೫೪೫ ಪಿಎಸ್ಐ ಹುದ್ದೆಗಳಿಗೆ ನಡೆದ ಪರೀಕ್ಷೆಗೆ ೫೪ ಸಾವಿರ ಅಭ್ಯರ್ಥಿಗಳು ಹಾಜರಿರಬೇಕಾಗಿತ್ತಾದರೂ ಕೆಲವರು ಗೈರಾಗಿದ್ದರು. ಯಾವುದೇ ಅಕ್ರಮಗಳು ನಡೆಯದೆ ಪೂರ್ಣಗೊಂಡ ಪರೀಕ್ಷೆಯ ಮೌಲ್ಯಮಾಪನವನ್ನು ಆದಷ್ಟು ಬೇಗ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದುʼ ಎಂದು ಗೃಹ ಸಚಿವರು ತಿಳಿಸಿದರು.

Advertisement

ಮುಂದಿನ ಹಂತದಲ್ಲಿ ೪೦೩ ಹುದ್ದೆಗಳಿಗೆ ಈಗಾಗಲೇ ದೈಹಿಕ ಪರೀಕ್ಷೆ ಮುಗಿದಿದ್ದು ಲಿಖಿತ ಪರೀಕ್ಷೆ ಬಾಕಿಯಿದೆ. ಇದನ್ನು ಕೂಡ ಕೆಇಎಗೆ ವಹಿಸುವ ಯೋಚನೆಯಿದೆ. ಎರಡೂ ಪ್ರಕ್ರಿಯೆ ಮುಗಿದರೆ ಒಟ್ಟು ೯೪೮ PSIಗಳು ಲಭ್ಯವಾಗುತ್ತಾರೆ ಎಂದು ಅವರು ಹೇಳಿದರು.

Advertisement
Tags :
Dr G PARAMESHWARLatestNewsNewsKannadaPSIಕರ್ನಾಟಕ
Advertisement
Next Article