For the best experience, open
https://m.newskannada.com
on your mobile browser.
Advertisement

ಮರು ಬಿಡುಗಡೆಯಾಗುತ್ತಿದೆ ಪುನೀತ್ ರಾಜಕುಮಾರ್ ಅಭಿನಯದ ‘ಅಂಜನಿಪುತ್ರ’ 

ಪುನೀತ್ ರಾಜಕುಮಾರ್  ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ ಅಂಜನಿಪುತ್ರ’  ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ.
03:26 PM Apr 29, 2024 IST | Ashika S
ಮರು ಬಿಡುಗಡೆಯಾಗುತ್ತಿದೆ ಪುನೀತ್ ರಾಜಕುಮಾರ್ ಅಭಿನಯದ ‘ಅಂಜನಿಪುತ್ರ’ 

ಬೆಂಗಳೂರು: ಪುನೀತ್ ರಾಜಕುಮಾರ್  ಅವರು ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಚಿತ್ರ ‘ ಅಂಜನಿಪುತ್ರ’  ಮೇ 10 ರಂದು ಮರು ಬಿಡುಗಡೆಯಾಗುತ್ತಿದೆ.

Advertisement

ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಮರು ಬಿಡುಗಡೆ(ರೀ ರಿಲೀಸ್) ಮಾಡುತ್ತಿರುವುದಾಗಿ ನಿರ್ಮಾಪಕ‌ ಎಂ ಎನ್ ಕುಮಾರ್ ತಿಳಿಸಿದ್ದಾರೆ.

ಸೂಪರ್ ಹಿಟ್ ಅಂಜನಿ ಪುತ್ರ ಚಿತ್ರವನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡಲು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Advertisement

ಎಂ.ಎನ್.ಕೆ‌ ಮೂವೀಸ್ ಲಾಂಛನದಲ್ಲಿ ಎಂ.ಎನ್ ಕುಮಾರ್ ನಿರ್ಮಿಸಿ, ಎ.ಹರ್ಷ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ರವಿ ಬಸ್ರೂರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ.   ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು.

Advertisement
Tags :
Advertisement