For the best experience, open
https://m.newskannada.com
on your mobile browser.
Advertisement

ಸಿಲಿಕಾನ್​ ಸಿಟಿ ಕಂಬಳಕ್ಕೆ ಪುನೀತ್​ ಹೆಸರು ಫೈನಲ್​​

ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯಲ್ಲಿ ಕರಾವಳಿಯ ಜಾನಪದ ಆಟ ಕಂಬಳ ನಡೆಯಲಿದೆ. ಲಕ್ಷಾಂತರ ಜನ ಸೇರಲು ಸಕಲ ತಯಾರಿಯು ನಡೆದಿದೆ. ಈ ಮಧ್ಯೆ ಕಂಬಳ ಸಮಿತಿಯು ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ನೀಡಿದೆ.
12:35 PM Nov 22, 2023 IST | Gayathri SG
ಸಿಲಿಕಾನ್​ ಸಿಟಿ ಕಂಬಳಕ್ಕೆ ಪುನೀತ್​ ಹೆಸರು ಫೈನಲ್​​

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯಲ್ಲಿ ಕರಾವಳಿಯ ಜಾನಪದ ಆಟ ಕಂಬಳ ನಡೆಯಲಿದೆ. ಲಕ್ಷಾಂತರ ಜನ ಸೇರಲು ಸಕಲ ತಯಾರಿಯು ನಡೆದಿದೆ. ಈ ಮಧ್ಯೆ ಕಂಬಳ ಸಮಿತಿಯು ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ನೀಡಿದೆ.

Advertisement

ಕರಾವಳಿಯ ಜಾನಪದ ಆಟ ಕಂಬಳ ಮೊಟ್ಟ ಮೊದಲ ಬಾರಿಗೆ ರಾಜಧಾನಿ ಪ್ರವೇಶ ಮಾಡಿದೆ. ವಿಶೇಷ ಅಂದ್ರೆ ಬೆಂಗಳೂರು ಕಂಬಳಕ್ಕೆ ಅಪ್ಪು ಹೆಸರಿಡಲು ಕಂಬಳ ಸಮಿತಿ ನಿರ್ಧರಿಸಿದೆ. ಇದೇ ತಿಂಗಳ 25 ಮತ್ತು 26ರಂದು ನಗರದ ಪ್ಯಾಲೇಸ್ ಮೈದಾನದಲ್ಲಿ ಅದ್ಧೂರಿಯಾಗಿ ಅಬ್ಬರಿಸಲಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಟ್ಯಾಗ್ ಲೈನ್​​ನೊಂದಿಗೆ ಈ ಜಾನಪದ ಕ್ರೀಡೆ ಸೆಟ್ಟೇರಲಿದೆ. ಇನ್ನು ಈ ಜೋಡುಕರೆ ಕಂಬಳಕ್ಕೆ ಹೆಸರು ಫಿಕ್ಸ್ ಆಗಿರಲಿಲ್ಲ. ಬೆಂಗಳೂರಿಗೆ ಯಾವ ಹೆಸರಿಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅದಕ್ಕೆ ತೆರೆಬಿದ್ದಿದೆ.ಹೌದು. . ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿ ಬೆಂಗಳೂರು ಕಂಬಳಕ್ಕೆ ಕನ್ನಡದ ಲೆಜೆಂಡ್ ನಟರಾದ ರಾಜ್ ಕುಮಾರ್ ಮತ್ತು ಪುನೀತ್ ಅವರ ಹೆಸರುಗಳು ಜೊತೆ ಸೇರಿಸುವಂತೆ ಪುನೀತ್-ರಾಜ್ ಕಂಬಳ ಎಂದು ನಾಮಕರಣ ಮಾಡಲಾಗಿದೆ.

ಪುನೀತ್ ರಾಜ್ ಎಂದು ಹೆಸರಿಡುವುದು ನಮ್ಮ ಸಮಿತಿಯಿಂದ ಚರ್ಚೆ ನಡೆಯುತ್ತಿದ್ದು ಅದು ಕೊನೆ ನಿರ್ಧಾರಕ್ಕೆ ಬಂದಿದೆ. ಇನ್ನು ಅದರ ಉದ್ಘಾಟನೆಯನ್ನು ಅಶ್ವಿನ್ ಪುನೀತ್ ರಾಜ್​ಕುಮಾರ್​​ರಿಗೆ ಆಹ್ವಾನ ಮಾಡಿದ್ದೇವೆ ಎಂದು ಸಂಘಟನಾ ಸಮಿತಿ ಅಧ್ಯಕ್ಷಉಮೇಶ್ ಶೆಟ್ಟಿ ತಿಳಿಸಿದ್ದಾರೆ.

Advertisement

Advertisement
Tags :
Advertisement