For the best experience, open
https://m.newskannada.com
on your mobile browser.
Advertisement

ಒಡಿಶಾದ ಪುರಿ ಜಗನ್ನಾಥನ ಅದ್ದೂರಿ ರಥಯಾತ್ರೆಗೆ ರಾಷ್ಟ್ರಪತಿ ಮುರ್ಮು ಭಾಗಿ

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಎರಡು ದಿನ ವಾರ್ಷಿಕ ರಥಯಾತ್ರೆ ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
08:07 PM Jul 07, 2024 IST | Chaitra Kulal
ಒಡಿಶಾದ ಪುರಿ ಜಗನ್ನಾಥನ ಅದ್ದೂರಿ ರಥಯಾತ್ರೆಗೆ ರಾಷ್ಟ್ರಪತಿ ಮುರ್ಮು ಭಾಗಿ

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಎರಡು ದಿನ ವಾರ್ಷಿಕ ರಥಯಾತ್ರೆ ಇಂದಿನಿಂದ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Advertisement

ಬರೋಬ್ಬರಿ 53 ವರ್ಷಗಳ ನಂತರ ಜಗತ್ಪ್ರಸಿದ್ಧ ಜಗನ್ನಾಥನ ವಾರ್ಷಿಕ ರಥಯಾತ್ರೆ ನಡೆಯುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿ, ಅವರು ಲಕ್ಷಾಂತರ ಭಕ್ತರೊಂದಿಗೆ ಈ ರಥಯಾತ್ರೆಯನ್ನು ವೀಕ್ಷಿಸಿದ್ದಾರೆ.

ಇದಕ್ಕಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದ್ದು, ಸಾಮಾನ್ಯವಾಗಿ ಒಂದೇ ದಿನದಲ್ಲಿ ನಡೆಯುವ ಯಾತ್ರೆಯನ್ನು ಸುಗಮವಾಗಿ ನಡೆಸಲು ಒಡಿಶಾ ಸರ್ಕಾರ ವಿಸ್ತೃತ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಗನ್ನಾಥ ದೇವಾಲಯದ ಮೂರು ದೇವರುಗಳಾದ ಜಗನ್ನಾಥ, ಬಲರಾಮ್ ಮತ್ತು ಸುಭದ್ರಾ ಮೂರು ವಿಭಿನ್ನ ರಥಗಳಲ್ಲಿ ಸವಾರಿ ಮಾಡುತ್ತಾರೆ. ಈ ಕಾರಣಕ್ಕಾಗಿ ರಥಯಾತ್ರೆಯನ್ನು ರಥೋತ್ಸವ ಎಂದು ಕರೆಯುತ್ತಾರೆ.

ಅವರ ವಿಭಿನ್ನ ರಥಗಳನ್ನು ನಂದಿಘೋಷ, ತಾಳಧ್ವಜ ಮತ್ತು ದೇವದಳನ ಎಂದು ಕರೆಯಲಾಗುತ್ತದೆ. ಭಗವಾನ್ ಜಗನ್ನಾಥನ ನಂದಿಘೋಷ ರಥವು ಹದಿನೆಂಟು ಚಕ್ರಗಳನ್ನು ಹೊಂದಿದೆ. ಭಗವಾನ್ ಬಲರಾಮನ ತಾಳಧ್ವಜ ರಥವು ಹದಿನಾರು ಚಕ್ರಗಳನ್ನು ಹೊಂದಿದೆ ಮತ್ತು ಸುಭದ್ರೆಯ ಪದ್ಮಧ್ವಜ ರಥವು ಹದಿನಾಲ್ಕು ಚಕ್ರಗಳನ್ನು ಹೊಂದಿದೆ.

https://x.com/manishindiatv/status/1809944299494400316?

Advertisement
Tags :
Advertisement