ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಷ್ಯಾದ ಮಹಿಳೆಯರು 8 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ: ಪುಟಿನ್‌ ಕರೆ

'ರಷ್ಯಾದ ಮಹಿಳೆಯರು 8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕರೆ ನೀಡಿದ್ದಾರೆ. ಮಾಸ್ಕೋದಲ್ಲಿ ನಡೆದ ವಿಶ್ವ ರಷ್ಯಾದ ಪೀಪಲ್ಸ್ ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ಪುಟಿನ್‌, ಮುಂಬರುವ ದಶಕಗಳಲ್ಲಿ ರಷ್ಯಾದ ಜನಸಂಖ್ಯೆ ಹೆಚ್ಚಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
04:16 PM Dec 01, 2023 IST | Ashitha S

ಮಾಸ್ಕೋ: "ರಷ್ಯಾದ ಮಹಿಳೆಯರು 8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ" ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕರೆ ನೀಡಿದ್ದಾರೆ. ಮಾಸ್ಕೋದಲ್ಲಿ ನಡೆದ ವಿಶ್ವ ರಷ್ಯಾದ ಪೀಪಲ್ಸ್ ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ಪುಟಿನ್‌, ಮುಂಬರುವ ದಶಕಗಳಲ್ಲಿ ರಷ್ಯಾದ ಜನಸಂಖ್ಯೆ ಹೆಚ್ಚಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

Advertisement

ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದ ಕುಸಿಯುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ದೇಶದಲ್ಲಿ 3,00,000 ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ ಎಂದು ದಿ ಇಂಡಿಪೆಂಡೆಂಟ್ ವರದಿ ತಿಳಿಸಿದೆ.

ದೇಶದ ಅನೇಕ ಜನಾಂಗದವರು ನಾಲ್ಕು ಅಥವಾ ಐದಕ್ಕಿಂತ ಹೆಚ್ಚಿನ ಮಕ್ಕಳಿದ್ದ ಸುಭದ್ರ ಕುಟುಂಬ ವ್ಯವಸ್ಥೆ ಹೊಂದಿದ್ದರು. ನಮ್ಮ ಅಜ್ಜಿ, ಮುತ್ತಜ್ಜಿಯರು 7, 8 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕು.

Advertisement

ಮುಂಬರುವ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ರಷ್ಯಾದ ಜನಸಂಖ್ಯೆ ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ನಮ್ಮ ಗುರಿಯಾಗಿದೆ. ಇದು ರಷ್ಯಾದ ಭವಿಷ್ಯ ಹಾಗೂ ಸಹಸ್ರಮಾನ, ಶಾಶ್ವತವಾದ ರಷ್ಯಾಕ್ಕಾಗಿ ಅಗತ್ಯ. ಹೀಗಾಗಿ ಮಹಿಳೆಯರು 8 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ  ಎಂದು ಒತ್ತಿ ಹೇಳಿದ್ದಾರೆ.

Advertisement
Tags :
CHILDRENLatestNewsNewsKannadaPUTINrussianಪುಟಿನ್‌ ಕರೆ
Advertisement
Next Article