For the best experience, open
https://m.newskannada.com
on your mobile browser.
Advertisement

ಪುರುಷರಕಟ್ಟೆಯಲ್ಲಿ ಬಸ್- ಬೈಕ್ ಢಿಕ್ಕಿ: ಸವಾರ ಮೋಕ್ಷಿತ್ ಮೃತ್ಯು

ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್‌ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.
10:49 AM May 15, 2024 IST | Ashitha S
ಪುರುಷರಕಟ್ಟೆಯಲ್ಲಿ ಬಸ್  ಬೈಕ್ ಢಿಕ್ಕಿ  ಸವಾರ ಮೋಕ್ಷಿತ್ ಮೃತ್ಯು

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್‌ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಎಂದು ಗುರುತಿಸಲಾಗಿದೆ. ಮೋಕ್ಷಿತ್ ಗೌಡ ಅವರು ಪುರುಷರಕಟ್ಟೆಯಲ್ಲಿರುವ ಬಿಂದು ಫ್ಯಾಕ್ಟರಿಯಲ್ಲಿ ಸಿಫಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮೋಕ್ಷಿತ್ ಸರ್ವಿಸ್ ಗೆ ಇಟ್ಟಿದ್ದ ತನ್ನ ಬೈಕನ್ನು ವಾಪಾಸು ತರುತ್ತಿದ್ದ ವೇಳೆ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

Advertisement
Tags :
Advertisement