ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪುತ್ತೂರು: ವಿಶೇಷ ಚೇತನ ಮಕ್ಕಳಿಗಾಗಿ ಕಟ್ಟಡ ನಿರ್ಮಾಣ ಕಾಮಗಾರಿ ವಿಚಾರದಲ್ಲಿ ತಿಕ್ಕಾಟ

ನಗರದ ಹೃದಯ ಭಾಗದಲ್ಲಿರುವ ಸುಮಾರು 158 ವರ್ಷ ಇತಿಹಾಸವಿರುವ ಸರಕಾರಿ ಶಾಲೆಯಲ್ಲಿ ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶಾಸಕರ ನಡುವೆ ಕಟ್ಟಡದ ವಿಚಾರದಲ್ಲಿ ತಿಕ್ಕಾಟವೊಂದು ಶರುವಾಗಿದೆ. ಹೌದು. . ಶಾಲೆಯ ಜಾಗದಲ್ಲಿ ವಿಶೇಷ ಚೇತನದ ಮಕ್ಕಳಿಗಾಗಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗ್ತಿದೆ.
03:49 PM Feb 21, 2024 IST | Ashitha S

ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಸುಮಾರು 158 ವರ್ಷ ಇತಿಹಾಸವಿರುವ ಸರಕಾರಿ ಶಾಲೆಯಲ್ಲಿ ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ಶಾಸಕರ ನಡುವೆ ಕಟ್ಟಡದ ವಿಚಾರದಲ್ಲಿ ತಿಕ್ಕಾಟವೊಂದು ಶರುವಾಗಿದೆ. ಹೌದು. . ಶಾಲೆಯ ಜಾಗದಲ್ಲಿ ವಿಶೇಷ ಚೇತನದ ಮಕ್ಕಳಿಗಾಗಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗ್ತಿದೆ.

Advertisement

ಆದರೆ ಕಟ್ಟಡವನ್ನು ರಸ್ತೆಯ ಪಕ್ಕದಲ್ಲೇ ಇರುವ ಜಾಗದಲ್ಲಿ ಕಟ್ಟುವಂತೆ ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ಮನವಿ ಮಾಡಿಕೊಂಡಿದ್ದಾರೆ. ಆದರೆ ಮನವಿಯನ್ನು ತಿರಸ್ಕರಿಸಿ ಶಾಲೆಯ ಆವರಣದ ಒಳಗೆ ಕಟ್ಟಲು ಶಾಸಕ ಅಶೋಕ್ ಕುಮಾರ್ ರೈ ನಿರ್ಧಾರಿಸಿದ್ದಾರೆ. ಹೀಗಾಗಿ ಕಾಮಗಾರಿ ನಡೆಸದಂತೆ ಪೋಷಕರ, ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 3 ಎಕರೆ ವಿಸ್ತೀರ್ಣವಿರುವ ಶಾಲೆಯು 158 ವರ್ಷ ಇತಿಹಾಸವನ್ನ ಹೊಂದಿದೆ. ಇದನ್ನು ಮುಗಿಸುವ ಪ್ರಯತ್ನ ಮಾಡಲಾಗ್ತಿದೆ ಎಂಬ ಆರೋಪ ಕೇಳಿ ಬರ್ತಿದೆ.

ಈಗಾಗಲೇ ಅಸ್ತವ್ಯಸ್ತವಾಗಿ ಶಾಲೆ ನಡೆಯುತ್ತಿದೆ. ಒಂದು ಕಡೆ ತರಗತಿ, ಇನ್ನೊಂದು ಕಡೆ ಅಕ್ಷರ ದಾಸೋಹ ಕೊಠಡಿ, ಇನ್ನೊಂದೆಡೆ ನಲಿಕಲಿ ತರಗತಿ, ಮತ್ತೊಂದೆಡೆ ಸಾರ್ಟ್ ಕ್ಲಾಸ್. ಇದರ ಜೊತೆಗೆ ಶಾಲೆಯ ಆವರಣದೊಳಗೆ ಪ್ರಾಥಮಿಕ ಆರೋಗ್ಯ ಕೇಂದ್ರ. ಇನ್ನೊಂದು ಪಕ್ಕದಲ್ಲಿ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ. ಇದರಿಂದಾಗಿ ತರಗತಿ ಸಮಯದಲ್ಲಿ ಶಾಲೆಯ ಆವರಣದಲ್ಲಿ ಓಡಾಡುವ ವಾಹನಗಳು
ಮಕ್ಕಳಿಗೆ ಬೇಕಾದ ಸರಿಯಾದ ಆಟದ ಮೈದಾನದ ಕೊರತೆಯಿದೆ. ಇನ್ನು ಆಟವಾಡುವ ಮಕ್ಕಳ ಮಧ್ಯೆ ಸಂಚರಿಸುವ ವಾಹನಗಳು. ಇದರಿಂದ ಭಯದ ವಾತಾವರಣ ಉಂಟಾಗಿದೆ. ಈ ಎಲ್ಲಾ ಅವ್ಯವಸ್ಥೆಗಳ ನಡುವೆ ಇನ್ನೊಂದು ಕಛೇರಿ ಆರಂಭದ ಪ್ರಯತ್ನಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ವಿರೋಧ ಮಾಡಲು ಬಂದ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ವಿರುದ್ಧ ಅಧಿಕಾರಿ ಮುಗಿಬಿದ್ದಿದ್ದಾರೆ.
ಎಲ್ಲರ ವಿಡಿಯೋ ಮಾಡಿ ಬಂಧಿಸುವ ಎಚ್ಚರಿಕೆಯನ್ನು ಅಧಿಕಾರಿ ನೀಡಿದ್ದಾರೆ. ಅಲ್ಲದೇ ಅಧಿಕಾರಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿಸದ್ದಾರೆ. ಇನ್ನು ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಆಕ್ರೋಶ ಸ್ಪಲ್ಪ ತಿಳಿಯಾಗಿದೆ. ಬೇರೆ ಕಟ್ಟಡಗಳಿಗೆ ಹಾಕುವ ಹಣವನ್ನು ಹೊಸ ಶಾಲಾ ಕಟ್ಟಡ ಕಟ್ಟಲು ವಿನಿಯೋಗಿಸುವಂತೆ ಸ್ಥಳೀಯರು ಒತ್ತಾಯಸಿದ್ದಾರೆ. ಕಟ್ಟಡ ಕಟ್ಟಿ ಅದು ಮತ್ತೊಂದು ಅನೈತಿಕ ಚಟುವಟಿಕೆಗಳ ಕೇಂದ್ರವಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಶಾಲೆಯ ಆವರಣದಲ್ಲಿ ಇತರೆ ಯಾವುದೇ ಸರಕಾರಿ ಕಛೇರಿ ಇರದಂತೆ ಮನವಿ ಮಾಡಿಕೊಂಡಿದ್ದಾರೆ.

Advertisement

Advertisement
Tags :
GOVERNMENTindiaLatestNewsNewsKannadaPOLICEಪುತ್ತೂರುಮಂಗಳೂರು
Advertisement
Next Article